ಇಂದು ರಾಜ್ಯ ಸರ್ಕಾರದ ಎರಡನೇ ಮಹತ್ವಾಕಾಂಕ್ಷೆಯ ಯೋಜನೆಯ ಅರ್ಜಿ ಆರಂಭ

ಭಾನುವಾರ, 18 ಜೂನ್ 2023 (14:27 IST)
ಇಂದಿನಿಂದ ರಾಜ್ಯ ಸರ್ಕಾರದ ಎರಡನೇ ಮಹತ್ವಾಕಾಂಕ್ಷೆಯ ಯೋಜನೆಯ ಅರ್ಜಿ ಆರಂಭವಾಗಿದೆ.ಇಂದಿನಿಂದ ಆರಂಭ ವಾಗಬೇಕಿದ್ದ ಕೆಲ ವೆಬ್ ಸೈಟ್ ಗಳಲ್ಲಿ ಇನ್ನೂ ವಿಳಂಬವಾಗಿದೆ.ಬೆಸ್ಕಾಂ ಜೆಸ್ಕಾಂ ಚೆಸ್ಕಾಂ ಹೆಸ್ಕಾಂ  ಮೆಸ್ಕಾಂ ನಲ್ಲಿ 3ಗಂಟೆಯ ನಂತರ ಜಾರಿಯಾಗಲಿದೆ.
 
ಏಕಕಾಲದಲ್ಲಿ ರಾಜ್ಯಾದ್ಯಂತ ಜಾರಿಯಾಗಬೇಕಿದ್ದ ಗೃಹ ಜ್ಯೋತಿ ಇಂದು ಬೆಳ್ಳಿಗ್ಗೆಯಿಂದ ಬೆಂಗಳೂರು ೧ ನಲ್ಲಿ ಓಪನ್ ಆರಂಭವಾಗಲಿದೆ. ಮಧ್ಯಾಹ್ನದ ೩ಗಂಟೆ  ನಂತರ  ನಾಡಕಚೇರಿ,ಗ್ರಾಮ ಪಂಚಾಯ್ತಿ,ವಿದ್ಯುತ್ ಕಚೇರಿಯಲ್ಲಿ ಓಪನ್ ಆಗುವ ಸಾಧ್ಯತೆ ಇದೆ.ಏನಾದರೂ ಸರ್ವರ್ ಸಮಸ್ಯೆ ಕಂಡು ಬಂದರೆ ಮಧ್ಯಾಹ್ನ ಮೂರು ಗಂಟೆ ‌ನಂತರ  ಅರ್ಜಿ ಸಲ್ಲಿಸಬಹುದು .ಬಾಡಿಗೆ ಮನೆಯಲ್ಲಿ ಇರುವವರಿಗೂ ಹಾಗೂ ಸ್ವಂತ ಮನೆಯಲ್ಲಿ ಇರುವವರಿಗೂ ಸರಳಿ ಕರಣವನ್ನ ಇಂಧನ ಇಲಾಖೆ ಮಾಡಿದೆ.ಆಧಾರ್ ನಂಬರಗೆ ಮೊಬೈಲ್ ನಂಬರ್ ಲಿಂಕ್ ‌ಇರ್ಲೆಬೇಕು .ವಿದ್ಯುತ್ ಬಿಲ್‌ ಹಾಗೂ  ಆಧಾರ ಲಿಂಕ್‌ ಇರುವ ಮೊಬೈಲ್ ಕಡ್ಡಾಯ.ಈ‌ ಮೂರು ಇದ್ದರೆ‌ ಮಾತ್ರ ಅರ್ಜಿ‌‌ ಸಲ್ಲಿಸಬಹುದು .ಇವುಗಳನ್ನು ಕರ್ನಾಟಕ ಒನ್‌ ಬೆಂಗಳೂರು ಒನ್‌ ಹಾಗೂ ನಾಡ ಕಛೇರಿಗೆ ಹೋದರೆ ಸಾಕು .ಇಷ್ಟೇ ಇದ್ದರು ಅವರು ಗೃಹಜ್ಯೋತಿ ಯೋಜನೆ ಪಡೆಯಬಹುದು .ಯಾವುದೇ ಕರಾರು ಪತ್ರ ಅವಶ್ಯಕತೆ ಇಲ್ಲ.ಬೆಸ್ಕಾಂ ಸ್ಥಳೀಯ ಆಫಿಸ್ ಹಾಗೂ ಬೆಂಗಳೂರು ಒನ್‌ ಕರ್ನಾಟಕ ಒನ್‌ ನಾಡ ಕಛೇರಿ ಹಾಗೂ ಮೊಬೈಲ್ ಮೂಲಕವು ಅರ್ಜಿ ಸಲ್ಲಿಸಬಹುದು.ಬೆಳ್ಳಿಗ್ಗೆ ಬಾರದೆ ಇದ್ದರೆ ೩ ಗಂಟೆಯ ನಂತರ ಓಪನ್ ಆಗುತ್ತದೆ.ಮಧ್ಯಾಹ್ನ ಮೂರು ಗಂಟೆ ಸೇವಾ ಸಿಂಧು ಪೊರ್ಟಲ್ ನಲ್ಲಿ ಪ್ರಯತ್ನ ಮಾಡಬಹುದು ಎಂದು ಇಂಧನ ಇಲಾಖೆ ತಿಳಿಸಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ