ಸಿಡಿ ಪ್ರಕರಣ ಸಿಬಿಐಗೆ ಕೊಡುವ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ- ಆರಗ ಜ್ಞಾನೇಂದ್ರ
ಸಿಡಿ ಪ್ರಕರಣವನ್ನು ಸಿಬಿಐಗೆ ಕೊಡುವ ವಿಚಾರವಾಗಿ ಬೆಂಗಳೂರಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು,ರಮೇಶ್ ಜಾರಕಿಹೊಳಿ ಯವ್ರು ನನಗೆ ಮಾಹಿತಿ ಕೊಟ್ಟಿದ್ದಾರೆ.ಪ್ರಕರಣವನ್ನು ಸಿಬಿಐಗೆ ಕೊಡುವ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡಬೇಕಾಗುತ್ತದೆ.ಯಾರೇ ಆಗಲಿ ಸಿಡಿ ಮೂಲಕ ಯಾರನ್ನಾದರೂ ತೇಜೋವದೆ ಮಾಡೋದು ತಪ್ಪು.ಆ ರೀತಿಯ ಏನಾದರೂ ಇದ್ರೆ ಅಂತಹವ ವಿರುದ್ಧ ಕಾನೂನಿನ ರೀತಿಯಲ್ಲಿ ಕಠಿಣ ಕ್ರಮ ಆಗುತ್ತದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.