ಮುಂಬೈನಿಂದ ಬಂದು ಕೊರೊನಾ ತಡೆಗಾಗಿ ಇರುವ ಕ್ವಾರಂಟೈನ್ ನಲ್ಲಿರುವ ಕನ್ನಡಿಗರ ಕಷ್ಟ, ಸುಖವನ್ನು ಈ ಅಧಿಕಾರಿ ಕೇಳಿದ್ದಾರೆ.
ಕೃಷ್ಣರಾಜಪೇಟೆ ತಾಲ್ಲೂಕಿನ ಗಡಿ ಗ್ರಾಮವಾದ ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ್ದ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಸಾಂಸ್ಥಿಕ ಹೋಂ ಕ್ವಾರಂಟೈನ್ ಆಗಿರುವ 250 ಕ್ಕೂ ಹೆಚ್ಚಿನ ಮುಂಬೈ ಕನ್ನಡಿಗರ ಆರೋಗ್ಯ ವಿಚಾರಿಸಿದ್ದಾರೆ.
ಮುಂಬೈ ಹಾಗೂ ನಮ್ಮ ಮಂಡ್ಯದ ಊಟ, ತಿಂಡಿಗಳ ಆಹಾರದ ರುಚಿಯಲ್ಲಿ ತುಂಬಾ ವ್ಯತ್ಯಾಸವಿದೆ. ಊಟದ ತಯಾರಿಕೆಗೆ ಸ್ವಲ್ಪ ಸಪ್ಪೆ ಮಸಾಲೆ ಪದಾರ್ಥಗಳನ್ನು ಕಡಿಮೆ ಹಾಕಿದ್ದರೂ ನಮ್ಮ ಗ್ರಾಮೀಣ ಸೊಗಡಿನ ಮುದ್ದೆ ಸೊಪ್ಪಿನ ಸಾರು ಹಾಗೂ ತರಕಾರಿಗಳ ಊಟ ತುಂಬಾ ಪೌಷ್ಟಿಕಾಂಶಗಳಿಂದ ಕೂಡಿರುವ ಆಹಾರವಾಗಿದ್ದು ಹೈಜನಿಕ್ ಆಗಿದೆ.
ಅತ್ಯುತ್ತಮವಾದ ಪರಿಸರದಲ್ಲಿರುವ ಕಟ್ಟಡದಲ್ಲಿ ಹೋಂ ಕ್ವಾರಂಟೈನ್ ಆಗಿರುವ ನಿಮಗೆ ಆತ್ಮಶಕ್ತಿ ಹೆಚ್ಚಾಗಲು ಒಳ್ಳೆಯ ಗಾಳಿ, ಅತ್ಯುತ್ತಮ ವಾತಾವರಣವಿದೆ. ಕೊರೊನಾ ಯುದ್ಧದಲ್ಲಿ ಗೆದ್ದೇ ಗೆಲ್ಲುತ್ತೇವೆಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದಿದ್ದಾರೆ ಜಿಲ್ಲಾಧಿಕಾರಿ.