ಗೋಲಿ ಆಡಲು ಬಾರದ ಗೆಳೆಯನನ್ನು ಕೊಲೆ ಮಾಡಿದ ಆರೋಪಿಗಳು ಅರೆಸ್ಟ್!

ಶುಕ್ರವಾರ, 13 ಜುಲೈ 2018 (12:57 IST)
ಆತ ತನ್ನ ಪಾಡಿಗೆ ತಾನಿದ್ದ. ಗೆಳೆಯರು ಗೋಲಿ ಆಡೋಣ ಬಾ ಕಣೋ ಎಂದು ಕರೆದಿದ್ದಾರೆ. ಆದರೆ ಆತ ಊಹೂಂ... ನಾನು ಬರೋದಿಲ್ಲ ಅಂತ ಹೇಳಿದ್ದಾನೆ. ಸುಮ್ಮನೆ ಹೋಗಿ ಗೋಲಿ ಆಡಿದ್ದರೆ ಆತನ ಪ್ರಾಣ ಬಹುಶಃ ಉಳಿಯುತ್ತಿತ್ತೇನೋ? ಆದರೆ ಗೋಲಿ ಆಡಲು ನಿರಾಕರಿಸಿದ್ದರಿಂದ ಕೊಲೆಯಾಗಿ ಬಿಟ್ಟ. ಇದೀಗ ಕೊಲೆಗಾರರರು ಅಂದರ್ ಆಗಿದ್ದಾರೆ.

ಗೋಲಿ ಆಡಲು ನಿರಾಕರಣೆ ಮಾಡಿದ್ದಕ್ಕೆ ಸ್ನೇಹಿತನನ್ನೆ ಕೊಲೆ‌ ಮಾಡಿದ್ದ ಪಾಪಿ ಸ್ನೇಹಿತರಿಬ್ಬರನ್ನು
24 ಗಂಟೆಯಲ್ಲಿ ಬಂಧಿಸುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಶೋಕ್(23), ಶಿಲ್ಪಾಚಾರಿ(22)
ಬಂಧಿತರ ಆರೋಪಿಗಳು ಎನ್ನಲಾಗಿದೆ. ದಾವಣಗೆರೆ ನಗರದ ಪಿಬಿ ರಸ್ತೆ ಪ್ರೀತಂ ಬಾರ್ ಎದುರಿಗೆ ವಿನೋಬನಗರ ನಿವಾಸಿ
ಭರತ್(25) ಕೊಲೆಯಾಗಿದ್ದ.

ಘಟನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಶೀಘ್ರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ