ಪತ್ನಿಯ ಅಪ್ರಾಪ್ತ ತಂಗಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ವ್ಯಕ್ತಿ ಅರೆಸ್ಟ್
ಮಂಗಳವಾರ, 29 ಅಕ್ಟೋಬರ್ 2019 (11:10 IST)
ಶಿವಮೊಗ್ಗ : ವ್ಯಕ್ತಿಯೊಬ್ಬ ಪತ್ನಿಯ ಅಪ್ರಾಪ್ತ ತಂಗಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿ ಗ್ರಾಮದಲ್ಲಿ ನಡೆದಿದೆ.
ತೇಜು ಕುಮಾರ್ ಅತ್ಯಾಚಾರ ಎಸಗಿದ ಆರೋಪಿಯಾಗಿದ್ದು, ಈತ ಪತ್ನಿಯ 15 ವರ್ಷದ ತಂಗಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ, ಈ ಹಿನ್ನಲೆಯಲ್ಲಿ ಸಂತ್ರಸ್ತೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ಬಗ್ಗೆ ತಾಯಿ ವಿಚಾರಿಸಿದಾಗ ಸಂತ್ರಸ್ತೆ ಸತ್ಯಾಂಶ ತಿಳಿಸಿದ್ದಾಳೆ.
ಆರೋಪಿ ತೇಜು ಕುಮಾರ್ ವಿರುದ್ಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.