ಟಿಕ್ ಟಾಕ್ ನಿಂದ ಹೊರಬಿತ್ತು ಗಂಡನ ಅಕ್ರಮ ಸಂಬಂಧ

ಸೋಮವಾರ, 28 ಅಕ್ಟೋಬರ್ 2019 (17:36 IST)
ಟಿಕ್ ಟಾಕ್ ನಿಂದ ತನ್ನ ಗಂಡ ತನಗೆ ವಂಚನೆ ಮಾಡಿರೋ ವಿಷಯವನ್ನು ಪತ್ನಿಯೊಬ್ಬಳು ತಿಳಿದುಕೊಂಡು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಅನುರಾಧ, ಸತ್ಯರಾಜ್ ಏಳೆಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಸತ್ಯರಾಜ್ ಪತ್ನಿಗೆ ತಿಳಿಯದಂತೆ ಟಿಕ್ ಟಾಕ್ ನಲ್ಲಿ ಪರಿಚಯವಾಗಿದ್ದ ಯುವತಿಯೊಬ್ಬಳನ್ನು 2ನೇ ಹೆಂಡತಿಯನ್ನಾಗಿ ಮಾಡಿಕೊಂಡಿದ್ದನು.

ಗಂಡನ 2ನೇ ಹೆಂಡತಿ ವಿಷಯ ಮೊದಲನೇ ಹೆಂಡತಿ ಅನುರಾಧಳಿಗೆ ಗೊತ್ತಾಗಿದೆ. ಹೀಗಾಗಿ ಗಂಡ ಸತ್ಯರಾಜ್ ವಿರುದ್ಧ ಮೊದಲ ಪತ್ನಿ ಅನುರಾಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ