ಸಿಟಿ ರವಿಯನ್ನು ಕೊಲೆಗಡುಕ ಎಂದ ಲಕ್ಷ್ಮೀ ಹೆಬ್ಬಾಳ್ಕರ್‌, ಬೆಂಬಲಿಗರನ್ನು ಅರೆಸ್ಟ್ ಮಾಡಿ: ಜನಾರ್ದನ ರೆಡ್ಡಿ

Sampriya

ಶುಕ್ರವಾರ, 20 ಡಿಸೆಂಬರ್ 2024 (16:57 IST)
Photo Courtesy X
ಕೊಪ್ಪಳ: ಎಂಎಲ್‌ಸಿ ಸಿ.ಟಿ ರವಿ ಅವರನ್ನು ಕೊಲೆಗಡುಕ ಎಂದು ಕರೆದಿರುವ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಬೆಂಬಲಿಗರನ್ನು ಬಂಧಿಸಬೇಕೆಂದು ಶಾಸಕ ಜನಾರ್ದನ ರೆಡ್ಡಿ ಒತ್ತಾಯ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ ಓರ್ವ ಸಂಭಾವಿತ ರಾಜಕಾರಣಿ. ಉತ್ತಮ ರಾಜಕಾರಣಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಾಣಕ್ಕೆ ಅಪಾಯ ತರುವ ಕೆಲಸ ಮಾಡಿದ್ದಾರೆ.

ಈ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಕುಗ್ಗುವ ಕೆಲಸ ಮಾಡಿದ್ದಾರೆ. ಸಭಾಪತಿಗಳೇ ಯಾವುದೇ ರೆಕಾರ್ಡ್ ಇಲ್ಲಾ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನವರಿಗೆ ವಿನಾಶಕಾಲೇ ವಿಪರೀತ ಬುದ್ಧಿ ಬಂದಿದೆ. ಯಾವುದೋ ವಿಡಿಯೋ ತೋರಿಸಿ ಸಿ.ಟಿ ರವಿ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಸಿಟಿ ರವಿ ಅವರನ್ನು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಬೆಂಬಲಿಗರು ಕೊಲೆಗಡುಕ ಎಂದು ಕರೆದಿದ್ದಾರೆ. ಹಾಗಾದರೆ ಅವರು ಕೊಲೆ ಮಾಡಿದ್ದಾರೆ. ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ