ಈ ಬಾರಿ ನಳಿನ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರೆ, ಸ್ವಪಕ್ಷೀಯರದ್ದೇ ಬಂಡಾಯದ ಮತ್ತೊಂದು ಪ್ರತಿರೂಪವಾಗಿ ಅರುಣ್ ಪುತ್ತಿಲ ಕಣಕ್ಕಿಳಿಯುವ ಸಾಧ್ಯತೆ ಇತ್ತು. ಜೊತೆಗೆ ಸತ್ಯಜಿತ್ ಸುರತ್ಕಲ್ ಸ್ಪರ್ಧೆಗಿಳಿಯುವ ವಿಚಾರ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿತ್ತು. ಸತೀಶ್ ಕುಂಪಲ ಜಿಲ್ಲಾಧ್ಯಕ್ಷರಾದ ಬೆನ್ನಲ್ಲೇ ತೆರೆಮರೆಯಲ್ಲಿ ಸಂಧಾನ ಪ್ರಕ್ರಿಯೆಗಳು ನಡೆದವು. ಅದರಂತೆ ಇದೀಗ ಬಿಜೆಪಿಗೆ ಪುತ್ತಿಲ ಬೆಂಬಲಿಗರು ಸೇರ್ಪಡೆಗೊಂಡರು.
ಹಿರಿಯ ನಾಯಕರ ಜತೆ ಮಾತುಕತೆ ನಡೆಸಿದ ಬೃಜೇಶ್ ಚೌಟ್:
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಬ್ರಿಜೇಶ್ ಚೌಟಗೆ ಟಿಕೆಟ್ ಸಿಕ್ಕಾ ಬೆನ್ನಲ್ಲೇ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಿ ಸಲಹೆಯನ್ನು ಪಡೆದರು. ಇದರೊಂದಿಗೆ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಸೇರ್ಪಡೆ ಇದೀಗ ಬ್ರಿಜೇಶ್ ಚೌಟ ಅವರ ಹಾದಿ ಮತ್ತಷ್ಟು ಸುಗಮ ಮಾಡಿದೆ.