ರಾಜ್ಯದಲ್ಲಿ ಹೆಚ್ಚಿದ ಕೋಮು ಸಂಘರ್ಷ: ಹೂಡಿಕೆದಾರರು ತಮಿಳುನಾಡಿಗೆ ವಲಸೆ?

ಸೋಮವಾರ, 11 ಏಪ್ರಿಲ್ 2022 (15:18 IST)
ದಿನಕ್ಕೊಂದು ಕೋಮು ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಂಡವಾಳ ಹೂಡಿಕೆದಾರರು ಕರ್ನಾಟಕದಿಂದ ಕಾಲ್ಕೀಳಲು ಆರಂಭಿಸಿದ್ದು, ನೆರೆಯ ತಮಿಳುನಾಡಿಗೆ ವಲಸೆ ಹೋಗುತ್ತಿದ್ದಾರೆ.
ಇತ್ತೀಚೆಗಷ್ಟೇ ತೆಲಂಗಾಣದ ಸಚಿವರೊಬ್ಬರು ಕರ್ನಾಟಕದಿಂದ ಗಂಟುಮೂಟೆ ಕಟ್ಟಿ ಹೈದರಾಬಾದ್‌ ಗೆ ಬನ್ನಿ ಎಂದು ಕರೆ ನೀಡಿದ್ದರು. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಹಿಂದೂ ಸಂಘಟನೆಗಳು ಮುಸ್ಲಿಮರ ವಿರುದ್ಧ ದಿನಕ್ಕೊಂದು ವಿಷಯಗಳ ಮೇಲೆ ಅಭಿಯಾನ ಆರಂಭಿಸುತ್ತಿದ್ದಾರೆ.
ಹಿಜಾಬ್‌ ವಿವಾದ ಕಾಣಿಸಿಕೊಂಡ ನಂತರ ಕಳೆದ ಮೂರು ವಾರಗಳಿಂದ ರಾಜ್ಯದಲ್ಲಿ ಒಂದಲ್ಲ ಒಂದು ವಿಷಯದಲ್ಲಿ ಧಾರ್ಮಿಕ ಸಂಘರ್ಷ ನಡೆಯುತ್ತಿದೆ. ಇದೇ ವೇಳೆ ಕರ್ನಾಟಕ ಜಾಗತಿಕ ಮಟ್ಟದಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಸಮಾವೇಶಗಳನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ.
ಇದೇ ವೇಳೆ ತಮಿಳುನಾಡು ಹಣಕಾಸು ಸಚಿವ ಪಳನಿವೆಲ್‌ ತಿಂಗರಾಜನ್‌, ಐಟಿ ಕಂಪನಿಗಳು ತಮಿಳುನಾಡಿನತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ನೆರೆಯ ರಾಜ್ಯದಲ್ಲಿರುವ ಕಂಪನಿಗಳು ನಮ್ಮ ರಾಜ್ಯಗಳಲ್ಲಿ ಬಂಡವಾಳ ಹೂಡಲು ಆಸಕ್ತಿ ವಹಿಸುತ್ತಿವೆ ಎಂದು ಹೇಳಿದರು. ಆದರೆ ಯಾವ ರಾಜ್ಯದಿಂದ ಎಂದು ನಿರ್ದಿಷ್ಟವಾಗಿ ಉಲ್ಲೇಖ ಮಾಡಲು ನಿರಾಕರಿಸಿದರು.
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿರುವ ಐಟಿ ಕಂಪನಿಗಳು ತಮಿಳುನಾಡಿಗೆ ವಲಸೆ ಹೋಗುತ್ತಿವೆ ಎಂದು ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ