ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈ ಚಟ ಇದೆಯಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಕುಮಾರಸ್ವಾಮಿಯವರಿಗೆ ಬಿಜೆಪಿಯವರ ಮೇಲೆ ಆರೋಪ ಮಾಡುವುದೇ ಚಟ ಆಗಿದೆ. ಮೊದಲೆಲ್ಲಾ ಬಿಜೆಪಿಯವರು 30 ಕೋಟಿ ರೂ. ಆಫರ್ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದರು. ಈಗ ಹತ್ತುಕೋಟಿಗೆ ಬಂದಿದ್ದಾರೆ. ಹೀಗಂತ ಬಿಜೆಪಿಯ ಆರ್.ಅಶೋಕ್ ದೂರಿದ್ದಾರೆ.
ಈ ಮೈತ್ರಿ ಸರ್ಕಾರ ಒಂದು ರೀತಿಯಲ್ಲಿ ನುಗ್ಗೆ ಮರ ಇದ್ದಂತೆ. ಸಣ್ಣ ಗಾಳಿ ಬೀಸಿದ್ರೂ ಮುರುಕೊಂಡು ಬೀಳುತ್ತದೆ. ಅದಕ್ಕೆ ಈ ಸರ್ಕಾರ ಬೀಳುವ ಮೊದಲು ಅದರಲ್ಲಿ ಇರುವವರು ಸೇಫ್ ಸ್ಥಳಕ್ಕೆ ತಲುಪುವುದು ಸೂಕ್ತ. ಮೇಲಾಗಿ ಜೆಡಿಎಸ್ ನಲ್ಲೇ ಅವರ ರಾಜ್ಯಾಧ್ಯಕ್ಷರು ರಾಜೀನಾಮೆ ಕೊಟ್ಟಿದ್ದಾರೆ.
ಅದನ್ನು ಅಂಗೀಕರಿಸದೆ ವಿಶ್ವನಾಥ್ ಅವರ ಮನವೊಲಿಸಲೂ ಆಗದೇ ಅವರೇ ಪರದಾಡುತ್ತಿದ್ದಾರೆ. ಮೊದಲು ಕುಮಾರಸ್ವಾಮಿಯವರು ಅವರ ಪಕ್ಷದವರನ್ನು ಸರಿಯಾಗಿ ಇಟ್ಟುಕೊಳ್ಳಲಿ. ವಿಧಾನಸಭೆ ಅಧಿವೇಶನ ಕರೆದ್ರೆ ಜಿಂದಾಲ್ ವಿಷಯ, ಐಎಂಎ ವಿಷಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ನಾವು ಸಿದ್ಧರಿದ್ದೇವೆ ಅಂತ ಮಾಜಿ ಉಪ ಮುಖ್ಯಮಂತ್ರಿಯೂ ಆಗಿರುವ ಆರ್.ಅಶೋಕ್ ಹೇಳಿದ್ರು.