ಸಿಎಂ ಭೇಟಿ ಮಾಡಿದ ಮಲ್ಲಿಕಾರ್ಜುನ ಖರ್ಗೆ ಹೀಗ್ಯಾಕೆ ಹೇಳಿದ್ರು?

ಬುಧವಾರ, 19 ಜೂನ್ 2019 (15:09 IST)
ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು ಎಂದಿದ್ದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಖರ್ಗೆ ಬೇಸರದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ. ಅದು ಮುಗಿದ ಅಧ್ಯಾಯ ಎಂದಿದ್ದಾರೆ.

ನನ್ನ ಲೋಕಸಭಾ ‌ಕ್ಚೇತ್ರದಲ್ಲಿ ಬರುವ ಅಫ್ಜಲ್ ಪುರ ಕ್ಷೇತ್ರಕ್ಕೆ ಸಿಎಂ‌ ಹೋಗ್ತಿದ್ದಾರೆ. ಹೀಗಾಗಿ ಅಲ್ಲಿಗೆ ಹೋದಾಗ ಜನರು ಸಮಸ್ಯೆಗಳ ಬಗ್ಗೆ ಹೇಳ್ತಾರೆ. ಅದಕ್ಕೆ ಆ ಸಮಸ್ಯೆ ಗಳನ್ನು ಬಗೆಹರಿಸಿ ಎಂದು ಸಿಎಂ ಗೆ ಹೇಳಿದ್ದೇನೆ. ಚುನಾವಣೆ ನಂತರ ಒಂದು ಸಹಜ ಭೇಟಿ ಮಾಡಲಾಗಿದೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದ್ರು.

ಸಿಎಂ ಕುಮಾರಸ್ವಾಮಿ ‌ಭೇಟಿಯ ನಂತರ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದು, ಚುನಾವಣೆ ಬಳಿಕ ಮೊದಲ ಬಾರಿಗೆ ನನ್ನ ಮಾತಾನಾಡಿಸೋಕೆ ಸಿಎಂ ಬಂದಿದ್ರು. ಸಿಎಂ ನನ್ನ ಹಿಂದಿನ ಕ್ಷೇತ್ರವಾದ ಗುರುಮಿಟ್ಕಲ್ ‌ಮತಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡ್ತಿದ್ದಾರೆ. ಹೀಗಾಗಿ ಕ್ಷೇತ್ರದ ಸಮಸ್ಯೆ, ಜಿಲ್ಲೆಯ ‌ವಿಷಯಗಳ ಬಗ್ಗೆ ಅವರಿಗೆ ಮಾಹಿತಿ ‌ಕೊಟ್ಟಿದ್ದೇನೆ. ಅವರು ಕೂಡ ಈ ಸಮಸ್ಯೆ ಸರಿಪಡಿಸೋದಾಗಿ ನನಗೆ ಹೇಳಿದ್ದಾರೆ ಎಂದರು.  

ಕುಮಾರಸ್ವಾಮಿ ಸರ್ಕಾರ ನಡೆಸುವುದಕ್ಕೆ ಸಲಹೆ ಕೊಡುವ ಬಗ್ಗೆ ನಾನೇನು ಮಾತನಾಡಿಲ್ಲ. ನನ್ನ ಚುನಾವಣೆಯನ್ನೇ ನಾನು ಕಳೆದು ಕೊಂಡಿದ್ದೇನೆ. ಹೆಚ್ಚಿಗೆ ನಾನು ಸಲಹೆಗಳನ್ನು ಕೊಡೋಕೆ ಹೋದ್ರೆ ಅದು ಸಮಂಜಸ ಆಗೋದಿಲ್ಲ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಹಲವು ವ್ಯತ್ಯಾಸಗಳಿವೆ. ಯಾಕಂದ್ರೆ ಅನೇಕ ಕಾರ್ಯಕರ್ತರು ಬಂದು ನಮ್ಮ ಬಳಿ ಕಷ್ಟ ಹೇಳಿಕೊಳ್ತಾರೆ. ನನ್ನ ಜಿಲ್ಲೆಯಲ್ಲಿ ಎಲ್ಲರೂ ಒಂದಾಗಿ ಹೋಗಬೇಕು. ಈ ನಿಟ್ಟಿನಲ್ಲಿ ಕೆಲಸ ಆಗುವ ಬಗ್ಗೆ ಅಧಿಕಾರಿ ಗಳಿಗೆ ಸೂಚನೆ ಕೊಡಿ ಎಂದಿದ್ದೇನೆ. ಈ ವ್ಯತ್ಯಾಸವನ್ನು ಸರಿಪಡಿಸಿ ಎಂದಿದ್ದೇನೆ ಅಷ್ಟೇ ಎಂದರು ಖರ್ಗೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ