ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಪಿಎಲ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸೋದನ್ನು ಸ್ಥಗಿತಗೊಳಿಸಲಾಗಿತ್ತು. ಚುನಾವಣೆ ಮುಗಿದು ಹೊಸ ಸರ್ಕಾರ ರಚನೆ ಯಾದ ಮೇಲೆ ಮನೆ ಅಷ್ಟೇ ಆಹಾರ ಸಚಿವ ಕೆ,ಎಚ್ ಮುನಿಯಪ್ಪ ಬಿಪಿಲ್ ಅರ್ಹ ಅರ್ಜಿದಾರರು ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ರು, ಇದ್ರೆ ಇನ್ನೂ ಕೆಲವು ಹಳೆಯ ಬಿಪಿಎಲ್ ಅರ್ಜಿಗಳೆ ಬಾಕಿ ಇರುವುದರಿಂದಾಗಿ ಹಳೆ ಅರ್ಜೆಗಳನ್ನು ಪರಿಶೀಲ ಮಾಡಿ ಪೂರ್ಣಗೊಳಿಸಿದ ಬಳಿಕ ಹೊಸ ಬಿಪಿಎಲ್ ಅರ್ಜಿಗಳನ್ನ ಸಲ್ಲಿಸೋಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಇದೀಗ ಮತ್ತೆ ಆಹಾರ ಇಲಾಖೆಯಿಂದ ಮತ್ತೊಂದು ಮಹತ್ವದ ಆದೇಶ ಬಂದಿದ್ದು, ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಹಾಗು ತಿದ್ದುಪಡಿ ಮಾಡಲು ಮಾತ್ರ ಅನುಮೋದನೆ ನೀಡಲಾಗಿದ್ದು, ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆ ಮಾಡಲು ಅನುಮೋದನೆಯನ್ನು ನೀಡಲಾಗಿದೆ, ಸದ್ಯಕ್ಕೆ ಯಾವುದೇ ಹೊಸ ಬಿಪಿಎಲ್ ಕಾರ್ಡ್ಗಳ ಅರ್ಜಿಯನ್ನು ಸ್ವೀಕರಿಸುವುದಿಲ್ಲ. ಮುಂದಿನ ಆದೇಶದವರೆಗೂ ಯಾವುದೇ ಹೊಸ ಪಡಿತರ ಚೀಟಿಯನ್ನು ಮಂಜೂರು ಮಾಡದಂತೆ ಸರಕಾರ ಆದೇಶ ಮಾಡಿದೆ.