ಮಾಜಿ ಸಚಿವ ಸೋಮಣ್ಣ ಸ್ವಪಕ್ಷೀಯ ನಾಯಕರವಿರುದ್ಧವೇ ತಿರುಗಿಬಿದ್ದಿದ್ದಾರೆ..ವಿಧಾನಸಭಾ ಚುನಾವಣೆಯ ಸೋಲಿನ ಬಗ್ಗೆ ಮೌನ ಮುರಿದಿದ್ದಾರೆ..ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಮಾತ್ರ ಮಾತನಾಡ್ತಿದ್ದ ಬಿಜೆಪಿ ಲಿಂಗಾಯತ ನಾಯಕ ಸೋಲಿನ ಬಗ್ಗೆ ಮೊದಲ ಬಾರಿಗೆ ಬಿಜೆಪಿ ನಾಯಕರ ವಿರುದ್ಧವೇ ಕಿಡಿಕಾರಿದ್ದಾರೆ..ಹಾಗಾದ್ರೆ ಸೋಮಣ್ಣನ ಮುಂದಿನ ನಡೆಯೇನು..ಬಿಜೆಪಿಯಲ್ಲೇ ಉಳಿಯುತ್ತಾರಾ..ಇಲ್ಲಾ ಅಲ್ಲಿಂದ ಕಾಲ್ಕೀಳ್ತಾರಾ..ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಸೋಮಣ್ಣನ ನಡೆ. ಬಿಜೆಪಿಯ ಪ್ರಬಲ ಲಿಂಗಾಯತ ನಾಯಕ ಸೋಮಣ್ಣ ಸ್ವಪಕ್ಷೀಯರ ವಿರುದ್ಧವೇ ಮೊದಲ ಬಾರಿಗೆ ಅಪಸ್ವರ ಹೊರಡಿಸಿದ್ದಾರೆ..ವಿಧಾನಸಭಾ ಚುನಾವಣೆಯ ಸೋಲಿಗೆ ತಮ್ಮವರೇ ಕಾರಣ ಎಂಬ ಸತ್ಯವನ್ನ ಹೊರಹಾಕಿದ್ದಾರೆ..ದೊಡ್ಡವರ ಮಾತುನಂಬಿಯೇ ನಾನುಕೆಟ್ಟೆ,ಈಗಲೇ ಅಲ್ಸರ್ ಆಗಿದೆ ಅಂತ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ..ನಮ್ಮವರೇ ನಮಗೆ ತೊಂದ್ರೆ ಕೊಡ್ತಿದ್ದಾರೆ ಅದಕ್ಕೆ ನಾನೇ ಉದಾಹರಣೆ ಅಂತ ನೋವುತೋಡಿಕೊಂಡಿದ್ದಾರೆ..ಯಾಕಂದ್ರೆ ಗೋವಿಂದರಾಜನಗರ ಕ್ಷೇತ್ರದಲ್ಲೇ ಸೋಮಣ್ಣ ಸೇಫ್ ಆಗಿದ್ರು..ಆದ್ರೆ ಅವರನ್ನ ಚಾಮರಾಜನಗರ ಹಾಗೂ ವರುಣಾದಿಂದ ಕಣಕ್ಕಿಳಿಸಿದ್ದೇ ಅವರ ಸೋಲಿಗೆ ಕಾರಣ ಅನ್ನೋದು ಸತ್ಯ..ಅದನ್ನೇ ಸೋಮಣ್ಣ ಇಂದು ಹೊರಹಾಕಿದ್ದಾರಷ್ಟೇ.
ಇನ್ನು ಎರಡು ಕ್ಷೇತ್ರಗಳಸೋಲಿನ ಗುಂಗಿನಿಂದ ಸೋಮಣ್ಣ ಹೊರಬಂದಂತೆ ಕಾಣ್ತಿಲ್ಲ..ಸೋಲಿನ ನೋವು ಒಳಗಿದ್ರೂ ಬಹಿರಂಗವಾಗಿ ಪಕ್ಷದ ವಿರುದ್ಧ ಮಾತನಾಡುವ ಧೈರ್ಯ ಮಾಡಿರ್ಲಿಲ್ಲ..ಆದ್ರೆ ಸೋಲಿನ ನೋವು ಅವರ ಎದೆಯೊಳಗಿದ್ದ ನೋವನ್ನ ಇಂದು ಹೊರಹಾಕುವಂತೆ ಮಾಡಿದೆ..ಇದ್ರ ಹಿಂದೆ ಬೇರೆ ಲೆಕ್ಕಾಚಾರವೂ ಇದೆ ಅನ್ನೋ ಮಾತಿದೆ..ಸೋಮಣ್ಣ ಈಗಾಗ್ಲೇ ಕಾಂಗ್ರೆಸ್ ನಾಯಕರ ಮನೆ ಬಾಗಿಲು ಬಡಿದಿದ್ದಾರೆ ಎನ್ನಲಾಗ್ತಿದೆ..ಪರಮೇಶ್ವರ್,ಡಿಕೆಶಿ ಜೊತೆ ಮಾತುಕತೆಯನ್ನೂ ಮುಗಿಸಿದ್ದಾರೆ..ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸ್ತಾರೆ ಎಂಬ ಮಾತುಗಳಿವೆ..ಹೀಗಾಗಿಯೇ ಈಗಿನಿಂದಲೇ ತಯಾರಿಯನ್ನೂ ನಡೆಸಿದ್ದಾರೆ..ತಮ್ಮ ಪುತ್ರನ ರಾಜಕೀಯ ಕೆರಿಯರ್ ಗಾಗಿ ಅವರು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ತಾರೆಂಬ ಮಾತು ಹೊರಬಿದ್ದಿದೆ.