ನಗರದಲ್ಲಿ ಪ್ಲೇಕ್ಸ್ ಗಳು ಬ್ಯಾನರ್ ಗಳು ನಿಲುತ್ತಿದ್ದಂತೆ, ಶುರುವಾಗಿತ್ತು ಪೋಸ್ಟರ್ ಗಳ ಹಾವಳಿ..!

ಬುಧವಾರ, 15 ಮಾರ್ಚ್ 2023 (13:33 IST)
ಪೋಸ್ಟರ್ ವಿಚಾರದಲ್ಲಿ ಬಿಬಿಎಂಪಿ ಕೈ ಕಟ್ಟಿ ಬಾಯ್ ಮುಚ್ಚಿ ಕುಳಿತ್ತಿರೊದು ಯಾಕೆ ? ಮಾದ್ಯಮದಲ್ಲಿ ಸುದ್ದಿ ಪ್ರಸಾರವಾಗ್ತಿದಂತೆ  ಬಿಬಿಎಂಪಿ ಪೊಲೀಸ್ ಕಮಿಷನರ್ ಜೊತೆ ಹೈ ವೊಲ್ಟೇಜ್ ಮೀಟಿಂಗ್ ನಡೆಸಿದೆ.ರಾಜಕೀಯ ಪಕ್ಷಗಳು ಪೊಸ್ಟರ್ ವಿಚಾರದಲ್ಲಿ ಕಾನೂನಿನ ನಿಯಮಗಳನ್ನು ಗಾಳಿಗೆ ತುರಿ ಪಾಲಿಕೆ ಏಕಾಏಕಿ ಪೋಸ್ಟರ್ ಗೆ ಬ್ರೇಕ್ ಹಾಕಿದೆ.ಮುಂಬರುವ ಎಲೆಕ್ಷನ್  ತಯಾರಿಗಾಗಿ  ಪೋಸ್ಟರ್ ಗಳು ರಾರಾಜಿಸಿತ್ತಿದೆ.
 
ಪೋಸ್ಟರ್ ವಿಚಾರದಲ್ಲಿ ಚೀಫ್ ಕಮೀಷನರ್ ಕಂದಾಯ ವಿಭಾಗದ ಅಧಿಕಾರಿಗಳಿಂದ ಪೊಲೀಸ್ ಕಮೀಷನರ್ ಜೊತೆ ಮೀಟಿಂಗ್ ಮಾಡಲ್ಲಿದ್ದಾರೆ.ಸಭೆಯಲ್ಲಿ ಪ್ಲೆಕ್ಸ್,ಬ್ಯಾನರ್,ಪೋಸ್ಟರ್ ಗೆ ಕಡಿವಾಣ ಹಾಕಲು ದೊಡ್ಡ ಮಟ್ಟದಲ್ಲಿ ತೀರ್ಮಾನ ಮಾಡಲಾಗಿದೆ.ಈಗಾಗಲೇ ಒಟ್ಟು 90 ಕಂಪ್ಲೇಂಟ್ ಗಳಲ್ಲಿ 52 ಗಳು ಎಪ್,ಐ,ಆರ್ ದಾಖಲಾಗಿದೆ.ಸಂಬಂದಿಸಿದ ಠಾಣೆಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಕಮಿಷನರ್ ಮತ್ತು ಪಾಲಿಕೆ ಕಮೀಷನ್ ಅಧಿಕಾರಿಗಳಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಎಲೆಕ್ಷನ್ ಪೂರ್ವ ಸಿದ್ದತೆಗಾಗಿ ಯಾವುದೇ ನಿಯಮಗಳಲ್ಲಿ ಉಲ್ಲಂಘನೆಯ ಯಾದರೆ ಕಠಿಣ ಕ್ರಮ ಎಂದು ಪಾಲಿಕೆ ಕಮಿಷನರ್ ತುಷರ್ ಗಿರಿನಾಥ್ ಆದೇಶ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ