ಹುಟ್ಟಿದ ಮೂರೇ ದಿನಕ್ಕೆ ಮಗು ಜೀವ ಹೋಯ್ತು, ದುಃಖ ತಡೆಯದ ಬಾಣಂತಿ ಮಾಡಿದ್ದೇನು

Sampriya

ಸೋಮವಾರ, 11 ನವೆಂಬರ್ 2024 (14:24 IST)
Photo Courtesy X
ಮಂಗಳೂರು: ಇಲ್ಲಿನ ಲೇಡಿಗೋಷನ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಜಿಗಿದು ಬಾಣಂತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಇನ್ನೂ ಸಾವಿಗೆ ಕಾರಣ ತಿಳಿದುಬಂದಿಲ್ಲ.

ಮೃತ ಬಾಣಂತಿಯನ್ನು ಉಡುಪಿ ಜಿಲ್ಲೆಯ ಕಾರ್ಕಳದ ರಂಜಿತಾ ಆಚಾರ್ಯ (28) ಎಂದು ಗುರುತಿಸಲಾಗಿದೆ. ರಂಜಿತಾ ಅವರಿಗೆ ಅ.30 ಅವಧಿ ಪೂರ್ವ ಪ್ರಸವವಾಗಿತ್ತು. ಎನ್‌ಐಸಿಯುವಿನಲ್ಲಿ ಆರೈಕೆಯಲ್ಲಿದ್ದ ಶಿಶು ನವೆಂಬರ್ 3ರಂದು ಸಾವನ್ನಪ್ಪಿತ್ತು.

ರಂಜಿತಾ ಅವರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲು ಮನೆಯವರು ಕೂಡಾ ಬಂದಿದ್ದರು. ಆದರೆ ರಂಜಿತಾ ಇಂದು ಬೆಳಗ್ಗೆ ಏಕಾಏಕಿ ಆಸ್ಪತಯ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿದ್ದರು. ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಜಿಲ್ಲಾ ಸರ್ಕಾರಿ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರವಾದ ಪೆಟ್ಟಿನಿಂದ ರಂಜಿತಾ ಸಾವನ್ನಪ್ಪಿದರು ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನೂ ರಂಜಿತಾ ಅವರನ್ನು ಹೆರಿಗೆಗಾಗಿ ಇದಕ್ಕೂ ಮೊದಲು ಕಾರ್ಕಳದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೆಲವು ಗಂಭೀರ ಆರೋಗ್ಯ ಸಮಸ್ಯೆ ಇದ್ದುದರಿಂದ ಇಲ್ಲಿನ ಲೇಡಿಗೋಷನ್ ಆಸ್ಪತ್ರೆಗೆ ಅಕ್ಟೋಬರ್ 28ರಂದು ದಾಖಲು ಮಾಡಲಾಗಿತ್ತು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ