ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಕೇಸ್: ಕೆಜೆ ಜಾರ್ಜ್​ಗೆ ಬಿಗ್ ರಿಲೀಫ್

Sampriya

ಮಂಗಳವಾರ, 27 ಆಗಸ್ಟ್ 2024 (17:41 IST)
Photo Courtesy X
ನವದೆಹಲಿ: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಡಿವೈಎಸ್‌ಪಿ ಎಂ. ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ. ಜಾರ್ಜ್‌ ಅವರ ಪಾತ್ರವಿಲ್ಲ ಎಂದು ಹೈಕೋರ್ಟ್‌ ಆದೇಶವನ್ನೇ  ಸುಪ್ರೀಂಕೋರ್ಟ್ ಎತ್ತಿಹಿಡಿಯುವ ಮೂಲಕ ಕೆಜೆ ಜಾರ್ಜ್‌ಗೆ ಬಿಗ್ ರಿಲೀಫ್ ಸಿಕ್ಕಿದೆ.

ಗಣಪತಿ ಆತ್ಮಹತ್ಯೆ ಪ್ರಕರಣವನ್ನು ತನಿಖೆ ಮಾಡಿದ ವರದಿಯಲ್ಲೂ ಸಚಿವ ಕೆ.ಜೆ. ಜಾರ್ಜ್ ಅವರ ಪಾತ್ರವಿಲ್ಲ ಎಂದು ಹೇಳಲಾಗಿತ್ತು. ಅದಲ್ಲದೆ ಹೈಕೋರ್ಟ್‌ ತೀರ್ಪಿನಲ್ಲೂ ಜಾರ್ಜ್​ ಅವರ ಪಾತ್ರವಿಲ್ಲ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮೃತ ಗಣಪತಿಯವರ ಸಹೋದರಿ ಸಬೀತಾ, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಈ ಸಂಬಂಧ ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ನೇತೃತ್ವದ ದ್ವಿಸದಸ್ಯ ಪೀಠ, ಹೈಕೋರ್ಟ್​ನ ಆದೇಶವನ್ನು ಎತ್ತಿಹಿಡಿದಿದು ಆದೇಶ ಹೊರಡಿಸಿದೆ.

ಇದರಿಂದ ಸಚಿವ ಕೆಜೆ ಜಾರ್ಜ್‌ಗೆ ಬಿಗ್ ರಿಲೀಫ್‌ ಸಿಕ್ಕಿದೆ. ಹಾಗೇ ಈ ಪ್ರಕರಣದಲ್ಲಿ ಕೇಳಿಬಂದಿದ್ದ ಇಬ್ಬರು ಅಧಿಕಾರಿಗಳಿಗೂ ರಿಲೀಫ್ ಸಿಕ್ಕಿದೆ. ಐಎಸ್‌ ಅಧಿಕಾರಿ ಎಎಂ ಪ್ರಸಾದ್‌, ಐಪಿಎಸ್‌ ಅಧಿಕಾರಿ ಪ್ರಣಬ್‌ ಮೊಹಂತಿ ಸುಪ್ರೀಕೋರ್ಟ್​ ಆದೇಶದಿಂದ ನಿರಾಳರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ