ದಾವಣಗೆರೆ : ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಲೋಕಾಯುಕ್ತ ದಾಳಿಗೊಳಗಾಗಿದ್ದು, ಮಾಡಾಳ್ ವಿರೂಪಾಕ್ಷಪ್ಪ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು,
ಶಾಸಕರ ನಿವಾಸ ಮಾಡಾಳ್ ಗ್ರಾಮದಲ್ಲಿರುವ ನಿವಾಸಕ್ಕೆ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆಯಿಂದ ಸತತ 11 ಗಂಟೆಗಳ ಕಾಲ ನಿರಂತರವಾಗಿ ತಲಾಶ್ ನಡೆಸಿದ್ದು, ಹತ್ತು ಲಕ್ಷಕ್ಕೂ ಹೆಚ್ಚು ನಗದು ಹಾಗೂ ಆಭರಣ ಸಿಕ್ಕಿವೆ.
ಬೆಂಗಳೂರಿನಲ್ಲಿ ದಾಳಿ ನಡೆಸಿದ 17 ಗಂಟೆಗಳ ನಂತರ ಶಾಸಕರ ಸ್ವ ಗ್ರಾಮದಲ್ಲಿ ದಾಳಿ ನಡೆಸಿದ್ದು, ಬೆಟ್ಟ ಬಗೆದು ಹೆಗ್ಗಣ ಹಿಡಿದಂತಾಗಿದೆ. ಅಲ್ಲದೆ ಅಪಾರ ಪ್ರಾಮಾಣದ ಬೇನಾಮಿ ಆಸ್ತಿಯ ಬಗ್ಗೆ ಹೊಗೆಯಾಡುತ್ತಿದೆ.
ಚನ್ನಗಿರಿ ಕ್ಷೇತ್ರ ಎಂದರೆ ಮಾಡಾಳ್ ವಿರೂಪಾಕ್ಷಪ್ಪ, ಮಾಡಾಳ್ ವಿರೂಪಾಕ್ಷಪ್ಪ ಎಂದರೆ ಬಿಜೆಪಿ ಭದ್ರ ಕೋಟೆ. ಆದರೆ ಇದೀಗ ಚುನಾವಣೆ ಸಮೀಪದಲ್ಲೇ ಲೋಕಾಯುಕ್ತ ಶಾಕ್ ಕೊಟ್ಟಿದೆ. ಲಂಚ ಪಡೆಯುವಾಗಲೇ ಶಾಸಕರ ಪುತ್ರ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರೋದು ಶಾಸಕರನ್ನು ಬುಡಮೇಲಾಗಿಸಿದೆ.