ಇಡಿ ದಾಳಿ: ಕಾಂಗ್ರೆಸ್ ಮಹಾಧಿವೇಶನಕ್ಕೂ ಮುನ್ನ ನಾಯಕರಿಗೆ ಶಾಕ್!
ಬೆಳಗ್ಗೆಯಿಂದ 17 ಸ್ಥಳಗಳಲ್ಲಿ ಶೋಧ ಕಾರ್ಯಗಳು ನಡೆಸಲಾಗಿದೆ. ದುರ್ಗ್ ಶಾಸಕ ದೇವೇಂದ್ರ ಯಾದವ್, ಛತ್ತೀಸ್ಗಢದ ಕಾಂಗ್ರೆಸ್ ಖಜಾಂಚಿ ರಾಮ್ಗೋಪಾಲ್ ಅಗರವಾಲ್, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಅಧ್ಯಕ್ಷ ಸುಶೀಲ್ ಸನ್ನಿ ಅಗರ್ವಾಲ್ ಮತ್ತು ಪಕ್ಷದ ವಕ್ತಾರ ಆರ್.ಪಿ ಸಿಂಗ್ ಅವರ ಮನೆಗಳು ಸೇರಿವೆ.
ಉದ್ಯಮಿಗಳು, ದಲ್ಲಾಳಿಗಳು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸೇರಿಕೊಂಡು ಪ್ರತಿ ಟನ್ ಕಲ್ಲಿದ್ದಲ್ಲಿಗೆ ಅಕ್ರಮವಾಗಿ 25 ರೂ.ಗಳನ್ನು ತೆರಿಗೆ ರೂಪದಲ್ಲಿ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.