ಚರ್ಚ್ ಮೇಲೆ ದುಷ್ಕರ್ಮಿಗಳಿಂದ ದಾಳಿ ; ಏಸು ಕ್ರಿಸ್ತ ಮೂರ್ತಿ ಧ್ವಂಸ
ದುಷ್ಕರ್ಮಿಗಳು ಚರ್ಚ್ ವೊಂದರ ಮೇಲೆ ದಾಳಿ ನಡೆಸಿದ್ದು, ಚರ್ಚ್ ನಲ್ಲಿದ್ದ ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ.
ನಂಬಿಕೆ ಹಾಗೂ ಭಾವನೆಗಳನ್ನು ದುಷ್ಕರ್ಮಿಗಳು ಕೆರಳಿಸಲು ಈ ದುಷ್ಕೃತ್ಯ ನಡೆಸಿದ್ದಾರೆ ಅಂತ ಚರ್ಚ್ ನ ಸಿಬ್ಬಂದಿ ಹೇಳಿದ್ದಾರೆ.
ಕೆಂಗೇರಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.