ಕಾನ್ಸ್​ಟೇಬಲ್ ಮೇಲೆ ಆಟೋ ಹತ್ತಿಸಲು ಯತ್ನ

ಬುಧವಾರ, 16 ಆಗಸ್ಟ್ 2023 (18:30 IST)
ಆಟೋದಲ್ಲಿ ಅಪಾಯಕಾರಿ ವೀಲಿಂಗ್ ಮಾಡುತ್ತಿದ್ದವನನ್ನ ಪ್ರಶ್ನಿಸಿದ ಕಾನ್ಸಟೇಬಲ್ ಮೇಲೆಯೇ ಆಟೋ ಹತ್ತಿಸಲು ಮುಂದಾಗಿದ್ದ ಆರೋಪಿಯನ್ನು ಬಂಧಿಸಿದ ಘಟನೆ ಮೈಸೂರು ಜಿಲ್ಲೆಯ ರತ್ನಪುರಿ ಕ್ರಾಸ್ ಬಳಿ ನಡೆದಿದೆ. ರೋಷನ್ ಜಮೀರ್ ಅಹಮದ್ 26 ಬಂಧಿತ ಆರೋಪಿ. ಈತ ವಿ.ಪಿ ಬೋರೆ ಕಡೆಯಿಂದ ಮಾರುತಿ ಬಡಾವಣೆಗೆ ಬರುತ್ತಿದ್ದ. ಈ ವೇಳೆ ಹಿಂಭಾಗದ ಒಂದು ಚಕ್ರ ಎತ್ತಿ ಅತೀ ವೇಗವಾಗಿ ವೀಲಿಂಗ್ ಮಾಡಿದ್ದಾನೆ. ಇದನ್ನು ಗಮನಿಸಿದ ಪೊಲೀಸ ಪೇದೆ ಆಟೋ ತಡೆಯಲು ಮುಂದಾಗಿದ್ದು, ಅವರ ಮೇಲೆಯೇ ಹತ್ತಿಸಲು ಯತ್ನಿಸಿದ್ದಾನೆ. ವೀಲಿಂಗ್​ ಮಾಡಿದ್ದನ್ನು ಪ್ರಶ್ನಿಸಿದ ಪೊಲೀಸ್​ ಮೇಲೆಯೇ ಆಟೋ ಹತ್ತಿಸಲು ಮುಂದಾಗಿದ್ದ. ಕೂಡಲೇ ಎಚ್ಚೆತ್ತ ಪೊಲೀಸ್ ಸಿಬ್ಬಂದಿ ಪಕ್ಕಕ್ಕೆ ಸರಿದಿದ್ದಾರೆ. ಬಳಿಕ ಪೊಲೀಸ್ ವಾಹನದ ಮುಂಭಾಗದ ಎಡಭಾಗಕ್ಕೆ ಡಿಕ್ಕಿ ಹೊಡೆದು ಎಸ್ಕೇಪ್​ ಆಗಲು ಯತ್ನಿಸಿದ್ದ. ಇದೀಗ ಸಾರ್ವಜನಿಕರ ಸಹಾಯದಿಂದ ಆರೋಪಿ ರೋಷನ್‌ನನ್ನು ಪೊಲೀಸರು ಹಿಡಿದಿದ್ದಾರೆ. ಈ ಹಿಂದೆ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ರೋಷನ್ ವಿರುದ್ದ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಘಟನೆಯಲ್ಲಿ ಪೊಲೀಸ್ ವಾಹನ ಜಖಂ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ