ಬೆಂಗಳೂರಿನಲ್ಲಿ ಶಾಲೆ ಆರಂಭವಾದರೂ ಹಾಜರಾತಿ ಕಡ್ಡಾಯವಿಲ್ಲ :ಸಚಿವ ಬಿ.ಸಿ ನಾಗೇಶ್
ಗುರುವಾರ, 27 ಜನವರಿ 2022 (21:21 IST)
ಬೆಂಗಳೂರು: ತಜ್ಞರ ಒಪ್ಪಿಗೆಯ ಮೇರೆಗೆ ಸಾಧ್ಯವಾದರೆ ಸೋಮವಾರದಿಂದ ಬೆಂಗಳೂರಿನಲ್ಲಿ ಶಾಲೆಗಳು ಆರಂಭಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಶಾಲೆಗಳು ಆರಂಭಗೊಂಡರೂ ಮಕ್ಕಳಿಗೆ ಹಾಜರಾಗಿ ಕಡ್ಡಾಯವಲ್ಲ. ಚಂದನದಲ್ಲಿ ತರಗತಿಗಳನ್ನು ಮುಂದುವರೆಸಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.
ಮಕ್ಕಳಿಗೆ ಶಾಲೆಗೆ ಬರಲು ಬಲವಂತ ಮಾಡಲಾಗುವುದಿಲ್ಲ. 75 ಶೇಕಡ ಹಾಜರಾತಿಯನ್ನು ಕಡ್ಡಾಯಗೊಳಿಸುವುದು ಇಲ್ಲ. ರಾಜ್ಯದಲ್ಲಿ ಕೋವಿಡ್ ಸೋಂಕು ಇದ್ದರು, ಅದು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಎಂದು ಅವರು ತಿಳಿಸಿದರು.