ಅರ್ಜಿದಾರ ಸಂಸ್ಕೃತ ಭಾರತಿ ಟ್ರಸ್ಟ್ ಪರ ವಕೀಲರು ವಾದ ಮಂಡಿಸಿ, ಸರ್ಕಾರದ ಕ್ರಮ ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಉನ್ನತ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಷ್ಟ. ಪ್ರತ್ಯೇಕ ಶಿಕ್ಷಕರು, ಗ್ರಂಥಾಲಯ, ಪುಸ್ತಕ ಒದಗಿಸಬೇಕು. ಕನ್ನಡ ಒತ್ತಾಯಪೂರ್ವಕವಾಗಿ ಪ್ರೀತಿಸುವಂತೆ ಮಾಡುತ್ತಿದೆ. ಕರ್ನಾಟಕದಲ್ಲೇ ಬೇರೆ ಮಾಧ್ಯಮದ ವಿದ್ಯಾರ್ಥಿಗಳಿದ್ದಾರೆ. ಆ ವಿದ್ಯಾರ್ಥಿಗಳಿಗೆ ಸರ್ಕಾರದ ನೀತಿಯಿಂದ ತೊಂದರೆ ಆಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ. ಕ್ರಿಯಾತ್ಮಕ ಕನ್ನಡದ ಪಠ್ಯಕ್ರಮ ಕ್ಲಿಷ್ಟಕರವಾಗಿದೆ. ಭಾಷೆ ಆಯ್ಕೆಯಾಗಿ ಕಲಿಸಬೇಕು, ಕಡ್ಡಾಯಗೊಳಿಸಬಾರದು ಎಂದರು.