ಐಟಿ ಕಚೇರಿಯಲ್ಲಿರುವ ಐಷಾರಾಮಿ ಕಾರುಗಳು ಹರಾಜು

ಗುರುವಾರ, 23 ನವೆಂಬರ್ 2023 (15:24 IST)
ಐಟಿ ಕಛೇರಿಯ ಸುಕೇಶ್ ಚಂದ್ರಶೇಖರ್ ಗೆ ಸಂಬಂಧಿಸಿದ ಕಾರುಗಳನ್ನ ಹರಾಜು ಹಾಕಲಾಗಿದೆ.ನೂರಾರು ಕೋಟಿ ವಂಚನೆ ಕೇಸಲ್ಲಿ ಸುಕೇಶ್ ಚಂದ್ರಶೇಖರ್ ಸದ್ಯ ದೆಹಲಿ ಕಾರಾಗೃಹದಲ್ಲಿರೋ ಬಂಧಿತನಾಗಿದ್ದಾನೆ.
 
ಹಲವು ಸಂಸ್ಥೆಗಳಿಗೆ ತೆರಿಗೆ ಬಾಕಿ ಉಳಿಸಿಕೊಂಡಿರೋ ಆರೋಪದಲ್ಲಿ ಆದಾಯ ತೆರಿಗೆ ಇಲಾಖೆ ಹಲವು ಸ್ವತ್ತುಗಳನ್ನು ವಶಪಡಿಸಿಕೊಂಡಿತ್ತು.ಅದರಲ್ಲಿ 12 ಐಷಾರಾಮಿ ಕಾರುಗಳನ್ನು ಸಹ ಜಫ್ತಿ ಮಾಡಲಾಗಿತ್ತು.BMW, ರೇಂಜ್ ರೋವರ್, ಜಾಗ್ವಾರ್, ಪೋರ್ಷೆ, ಬೆಂಟ್ಲಿ, ರೋಲ್ಸ್ ರಾಯ್ಸ್, ಲ್ಯಾಂಬೋರ್ಗಿನಿ, ಡುಕಾಟಿ ಡಿಯಾವೆಲ್ ಸೇರಿ ಹಲವು ಐಷಾರಾಮಿ ಕಾರುಗಳು ಹರಾಜು ಮಾಡಲಾಗಿದೆ.ನ.28 ರಂದು ಹರಾಜು ಹಾಕಲು  ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.
 
ಸುಮಾರು 308 ಕೋಟಿ ತೆರಿಗೆಯನ್ನು ಸುಕೇಶ್ ಬಾಕಿ ಉಳಿಸಿಕೊಂಡಿದ್ದ.ಕೇಂದ್ರ ಕಾನೂನು ಸಚಿವಾಲಯದ ಅಧಿಕಾರಿ ಅಂತೇಳಿ ನೂರಾರು ಕೋಟಿ ಔಷಧಾ ಕಂಪನಿಯೊಂದರ ಪ್ರವರ್ತಕರಿಗೆ ಜಾಮೀನು ಕೊಡಿಸೋದಾಗಿ  ವಂಚನೆ ಮಾಡಿದ್ದಾರೆ.ಇನ್ನು ಇಡಿ ಕೂಡ ಸುಕೇಶ್ ಮೇಲೆ ಕೇಸ್ ದಾಖಲಿಸಿ ತನಿಖೆ ನಡೆಸ್ತಾ ಇದೆ.ಸದ್ಯ ಈತನ ಆಸ್ತಿ ಪಾಸ್ತಿ ಜೊತೆಗೆ ಐಷಾರಾಮಿ ಕಾರುಗಳನ್ನು ಐಟಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ.ಈಗ 12 ಐಷಾರಾಮಿ ಕಾರುಗಳನ್ನು ಹರಾಜು ಮಾಡಿ ತೆರಿಗೆ ವಸೂಲಿಗೆ ಮುಂದಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ