ರ್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಲಿಲ್ಲ ಅಂದರೆ ಈ ಬಾರಿಯ ಚುನಾವಣಾ ಬಹಿಷ್ಕಾರ ಮಾಡುವ ಎಚ್ಚರಿಕೆ ಕೊಟ್ಟಿದ್ದಾರೆ.ರ್ಯಾಪಿಡೋ ಬೈಕ್ ಟ್ಯಾಕ್ಸಿಯಿಂದ ಮಕ್ಕಳಿಗೆ ಸ್ಕೂಲ್ ಫೀಸ್ ಕಟ್ಟಲು ಆಗ್ತಿಲ್ಲ.ತಂದೆ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಮೆಡಿಸಿನ್ ಕೊಡಿಸಲು ಆಗ್ತಿಲ್ಲ.ರ್ಯಾಪಿಡೋ ಬೈಕ್ ಟ್ಯಾಕ್ಸಿ ಯಿಂದ ಆಟೋ ಚಾಲಕರು ಜೀವನ ನಡೆಸಲು ಆಗ್ತಿಲ್ಲ.ದಯವಿಟ್ಟು ಸಾರಿಗೆ ಸಚಿವ ಶ್ರೀ ರಾಮುಲು ರ್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಎಂದು ಚಾಲಕರು ಮನವಿ ಮಾಡಿದಾರೆ.
ಈಗಾಗಲೇ ಸಾರಿಗೆ ಸಚಿವ ಶ್ರೀ ರಾಮುಲು ಕಳೆದ ವಾರ ಬಳ್ಳಾರಿಯಲ್ಲಿ ಎಲೆಕ್ಷನ್ ಒಳಗೆ ಆಟೋ ಚಾಲಕರಿಗೆ ಸಿಹಿಸುದ್ದಿ ನೀಡ್ತಿನಿ , ರ್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಲು ಸಾರಿಗೆ ಇಲಾಖೆಯ ಕಾರ್ಯದರ್ಶಿ ಮತ್ತು ಆರ್ಟಿಓ ಕಮೀಷನರ್ ಗೆ ಹೇಳಿದ್ದೀನಿ ಎಂದು ಹೇಳಿಕೆ ನೀಡಿದ್ರು .ಆದರೆ ಒಂದು ವಾರ ಕಳೆದ್ರು ಇನ್ನೂ ಯಾವುದೇ ರ್ಯಾಪಿಡೋ ಬ್ಯಾನ್ ಮಾಡುವ ಆದೇಶ ಹೊರಡಿಸಿಲ್ಲ .ಹಾಗಾಗಿ ಆಟೋ ಚಾಲಕರು ಮಾತು ತಪ್ಪಿದ ಶ್ರೀ ರಾಮುಲು ಎಂದು ಹೆಂಡತಿ ಮಕ್ಕಳೊಂದಿಗೆ ವಿಡಿಯೋ ಮಾಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.29 ರಂದು ರ್ಯಾಪಿಡೋ ಬೈಕ್ ಟ್ಯಾಕ್ಸಿ ಸಂಬಂಧಿಸಿದಂತೆ ವಿಚಾರಣೆಯಿದ್ದು,ಅಂದು ಚಾಲಕರಿಗೆ ಕೋರ್ಟ್ ನಲ್ಲಿ ನ್ಯಾಯ ಸಿಗುತ್ತದೆ ಎಂದಿರುವ ಆರ್ಟಿಓ ಅಧಿಕಾರಿಗಳು ಈ ಹಿನ್ನೆಲೆಯಲ್ಲಿ 29 ರಂದು ಕೋರ್ಟ್ ನಲ್ಲಿ ಚಾಲಕರಿಗೆ ನ್ಯಾಯ ಸಿಗಲಿಲ್ಲ ಎಂದರೆ 30 ರಂದು ಏರ್ಪೋರ್ಟ್ ರೋಡ್ ಮತ್ತು ಕಾರ್ಪೋರೇಷನ್ ಸರ್ಕಲ್ ನಲ್ಲಿ ಆಟೋಗಳನ್ನು ನಿಲ್ಲಿಸಿ ರೋಡ್ ಬಂದ್ ಮಾಡ್ತಿವಿ ಎಂದು ಆಟೋಚಾಲಕರು ಎಚ್ಚರಿಕೆ ನೀಡಿದ್ದಾರೆ.