ಗೋವಾದಲ್ಲಿ ಯುವಕ-ಯುವತಿಯರ ಆಟೋ ರನ್

ಸೋಮವಾರ, 16 ಡಿಸೆಂಬರ್ 2019 (19:31 IST)
ಯುವಕ – ಯುವತಿಯರ ಆಟೋ ರನ್ ಗೋವಾಕ್ಕೆ ಕಾಲಿಟ್ಟಿದೆ.

ಕನ್ಯಾಕುಮಾರಿಯಿಂದ ಗುಜರಾತ್ ವರೆಗೆ ಹಮ್ಮಿಕೊಂಡಿರುವ ಸೇವಾ ಯುಕೆ (ಇಂಗ್ಲೆಂಡ್) ಯುವಕ - ಯುವತಿಯರ ಆಟೋರನ್ ಯಾತ್ರೆ ಹುಬ್ಬಳ್ಳಿ ನಗರಕ್ಕೆ ಬಂದಿದೆ.

ಮುಂದಿನ ಪ್ರಯಾಣ ಗೋವಾಕ್ಕೆ ಬೆಳಸಲಿರುವ‌ ತಂಡಕ್ಕೆ ಸಚಿವ ಜಗದೀಶ್ ಶೆಟ್ಟರ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ನಗರದ ಜಿಮ್ ಖಾನಾ ಮೈದಾನದಿಂದ ಹೊರಟಿರುವ ಈ ಆಟೋರನ್ ಯಾತ್ರೆ ಸುಮಾರು 30 ಅಟೋಗಳ ಮೂಲಕ ಗುಜರಾತ್ ವರೆಗೆ ಪ್ರಯಾಣ ಬೆಳೆಸಲಿದ್ದಾರೆ. ಪ್ರಯಾಣದಲ್ಲಿ ದೇಣಿಗೆ ಸಂಗ್ರಹ ಮಾಡಿ ಅನಾಥರು, ಅಂಧರು, ವಿಕಲಾಂಗರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ