ಪೊಲೀಸರಿಗೆ ಗೌರವ ಕೊಡೋದು ಹೇಗೆಂದು ಮೋದಿ ನೋಡಿ ಕಲಿಯಿರಿ: ಟ್ರೋಲ್ ಆದ ಸಿದ್ದರಾಮಯ್ಯ
ಈ ಹಿಂದೆ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಬಿಜೆಪಿ ಪರ ಘೋಷಣೆ ಕೂಗಿದ್ದಕ್ಕೆ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ವೇದಿಕೆಯಲ್ಲೇ ಸಿಎಂ ಸಿದ್ದರಾಮಯ್ಯ ಗರಂ ಆಗಿ ಹೊಡೆಯಲೆಂಬಂತೆ ಕೈ ಎತ್ತಿದ್ದರು. ಈ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಸ್ವಯಂ ನಿವೃತ್ತಿಗೆ ತೆಗೆದುಕೊಳ್ಳಲೂ ಮುಂದಾಗಿದ್ದರು.
ಇದೀಗ ನಿನ್ನೆ ಪ್ರಧಾನಿ ಮೋದಿ ಹಳದಿ ಲೈನ್ ಮೆಟ್ರೋ ಉದ್ಘಾಟನೆಗೆ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ಅವರನ್ನು ಸ್ವಾಗತಿಸಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಎ. ಸಲೀಂ ಕೂಡಾ ಬಂದಿದ್ದರು. ಪ್ರಧಾನಿಗೆ ಅವರು ಸೆಲ್ಯೂಟ್ ಹೊಡೆದು ನಿಂತಿದ್ದರೆ, ಮೋದಿ ಕೈ ಮುಗಿದು ಗೌರವ ಸಲ್ಲಿಸಿದ್ದಾರೆ.
ಈ ಎರಡೂ ಸಂದರ್ಭಗಳ ಫೋಟೋ ಎಡಿಟ್ ಮಾಡಿ ನೆಟ್ಟಿಗರು ಹೇಗೆ ಗೌರವ ಕೊಡಬೇಕೆಂದು ಕಲಿಯಿರಿ ಎಂದು ಟಾಂಗ್ ಕೊಟ್ಟಿದ್ದಾರೆ. ಪೊಲೀಸ್ ಅಧಿಕಾರಿಗಳೆಂದರೆ ಆಡಳಿತ ಮಾಡುವವರ ಅಡಿಯಾಳುಗಳಲ್ಲ. ಈ ಎರಡೂ ಫೋಟೋಗಳಲ್ಲಿರುವ ವ್ಯತ್ಯಾಸವನ್ನು ಜನರು ಗಮನಿಸಬೇಕು ಎಂದಿದ್ದಾರೆ.