ಲಾಕ್ ಡೌನ್ ಮಾಡುವಂತೆ ಸರ್ಕಾರಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಬಿಬಿಎಂಪಿ ಕಮಿಷನರ್ ನಿಂದ ಸಲಹೆ

ಸೋಮವಾರ, 26 ಏಪ್ರಿಲ್ 2021 (11:12 IST)
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡುವಂತೆ ಸರ್ಕಾರಕ್ಕೆ ಹಲವರು ಸಲಹೆ ನೀಡುತ್ತಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ರಾಜ್ಯದಲ್ಲಿ ಕೊರೊನಾ ಪ್ರಕರಣ ಮಿತಿಮೀರುತ್ತಿದೆ.  ಜನತಾ ಕರ್ಪ್ಯೂನಿಂದ ಜನರಿಗೆ ತಿಳುವಳಿಕೆ ಬರಲ್ಲ. ಕೊರೊನಾ ಕಂಟ್ರೋಲ್ ಗೆ ಲಾಕ್ ಡೌನ್ ಒಂದೇ ಪರಿಹಾರ. ಹಾಗಾಗಿ ರಾಜ್ಯದಲ್ಲಿ 10 ದಿನ ಲಾಕ್ ಡೌನ್ ಮಾಡಿ ಎಂದು ತಿಳಿಸಿದ್ದಾರೆ.

ಹಾಗೇ ಬೆಂಗಳೂರನ್ನು 2 ವಾರ ಲಾಕ್ ಡೌನ್ ಮಾಡಿ. ತಜ್ಞರ ಸಲಹೆ ಪಡೆದು ಲಾಕ್ ಡೌನ್ ಮಾಡುವಂತೆ ಸಿಎಸ್ ಗೆ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಸಲಹೆ ನೀಡಿದ್ದಾರೆ.  ನಿನ್ನೆ ಒಂದೇ ದಿನ 20,733 ಕೊರೊನಾ ಕೇಸ್ ಇದೆ. ಲಾಕ್ ಡೌನ್ ಮಾಡದಿದ್ರೆ ನಿಯಂತ್ರಣ ಅಸಾಧ್ಯ. ಲಾಕ್ ಡೌನ್ ಮಾಡಿದ್ರೆ ಸೋಂಕು ಕಡಿಮೆ ಆಗುತ್ತೆ. ಇಡೀ ಬೆಂಗಳೂರಿಗೆ ಹರಡುವ ಮುನ್ನ ಲಾಕ್ ಮಾಡ ಎಂದು  ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ