ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಫ್ಲೆಕ್ಸ್ ಹಾಕಿದ್ದಕ್ಕೆ ಕೆಲವರಿಗೆ ಬೇಸರವಾಗಿದೆ, ಇನ್ನೂ ಕೆಲವರಿಗೆ ನನ್ನ ಫ್ಲೆಕ್ಸ್ನಿಂದ ಖುಷಿಯಾಗಿದೆ. ಬಹಳಷ್ಟು ಜನರು ನನಗೆ ಫೋನ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಪರೋಕ್ಷವಾಗಿ ಮಾಜಿ ಸಚಿವ K.S. ಈಶ್ವರಪ್ಪಗೆ ಮಂಜುನಾಥ್ ತಿರುಗೇಟು ನೀಡಿದ್ದಾರೆ. 32 ವರ್ಷಗಳ ಕಾಲ K.S ಈಶ್ವರಪ್ಪನವರಿಗೆ ಪಕ್ಷ ಅಧಿಕಾರ ನೀಡಿದೆ. ಅವರು ಸುರಕ್ಷಿತ ಕ್ಷೇತ್ರದಲ್ಲಿ ಗೂಟ ಹಾಕಿಕೊಂಡು ಕುಳಿತಿದ್ದಾರೆ. ಅನೇಕ ಹಿರಿಯರು ಸಮರ್ಥರು ಪಕ್ಷದಲ್ಲಿದ್ದಾರೆ. ಸಿದ್ದರಾಮಣ್ಣ, ಭಾನುಪ್ರಕಾಶ್, ರುದ್ರೇಗೌಡ ಸೇರಿದಂತೆ ಅನೇಕರಿದ್ದಾರೆ. ಅವರೆಲ್ಲರನ್ನೂ ಬಿಟ್ಟು ಈಶ್ವರಪ್ಪ ತಮ್ಮ ಮಗನಿಗೆ ಟಿಕೆಟ್ ಕೇಳುತ್ತಿದ್ದಾರೆ ಎಂದು ಕಿಡಿಕಾರಿದ್ರು. ಹೀಗಾಗಿ ನಾನು ಟಿಕೆಟ್ ಕೇಳುತ್ತಿದ್ದೇನೆ.