ಸಿದ್ದರಾಮಯ್ಯ ಇಂದು ದೇವಸ್ಥಾನ ಬಿಟ್ಟು ಬದುಕುತ್ತಿಲ್ಲ : ಈಶ್ವರಪ್ಪ

ಶನಿವಾರ, 11 ಮಾರ್ಚ್ 2023 (14:03 IST)
ಮಡಿಕೇರಿ : ಮನುವಾದಿಗಳು, ಪುರೋಹಿತಶಾಹಿಗಳು ಅಪಾಯಕಾರಿ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರ ರಾಜ್ಯದಲ್ಲಿ ಸಿದ್ದರಾಮಯ್ಯನಂತಹ ಇಷ್ಟು ದುಷ್ಟನನ್ನು ಎಲ್ಲೂ ನೋಡಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಮುಂಚೆ ಕುಂಕುಮ ಎಂದರೆ ಸಿದ್ದರಾಮಯ್ಯ ಬೆಚ್ಚಿ ಬೀಳುತ್ತಿದ್ದರು. ಆದರೆ ಇಂದು ಹಣೆತುಂಬ ಕುಂಕುಮ ಹಚ್ಚುತ್ತಾರೆ. ದೇವಸ್ಥಾನ, ಮಠಗಳನ್ನು ಬಿಟ್ಟು ಸಿದ್ದರಾಮಯ್ಯ ಬದುಕುತ್ತಿಲ್ಲ.

ನಾನು ಯಾವ ಕಾರಣಕ್ಕೂ ಇವೆಲ್ಲವನ್ನು ಇನ್ನು ಮುಂದೆ ಮಾಡುವುದಿಲ್ಲ ಎಂದು ಸಿದ್ದು ಹೇಳಲಿ. ನಾವು ಮುಸಲ್ಮಾನರ ಪರ, ಗೋಹತ್ಯೆ ವಿರೋಧಿಸುತ್ತೇವೆ ಅಂತ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಿ ಎಂದು ಸವಾಲು ಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ