ಬಿ-ಖಾತಾ ಅಭಿಯಾನ ರಾಜ್ಯಕ್ಕೆ ವಿಸ್ತರಣೆ: ಸರ್ಕಾರಕ್ಕೆ ಬೊಕ್ಕಸಕ್ಕೆ ₹4 ಸಾವಿರ ಕೋಟಿ ಆದಾಯ ನಿರೀಕ್ಷೆ

Sampriya

ಮಂಗಳವಾರ, 18 ಫೆಬ್ರವರಿ 2025 (16:56 IST)
ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದ್ದ ಬಿ-ಖಾತಾ ಅಭಿಯಾನವನ್ನು ಈಗ ರಾಜ್ಯ ಸರ್ಕಾರವು ರಾಜ್ಯದಾದ್ಯಂತ ವಿಸ್ತರಣೆ ಆಗಿದೆ. ಈ ಮೂಲಕ  ರಾಜ್ಯದ ಬೊಕ್ಕಸಕ್ಕೆ ಬರೋಬ್ಬರಿ ₹4 ಸಾವಿರ ಕೋಟಿ ಆದಾಯ ನಿರೀಕ್ಷೆ ಹೊಂದಿದೆ.

ಬಿ-ಖಾತಾ ನೀಡಲು, ಪಡೆಯಲು 3 ತಿಂಗಳು ಡೆಡ್ ಲೈನ್ ಕೊಟ್ಟಿದೆ. ಬಿ-ಖಾತಾ ನೀಡುವ ಸಂಬಂಧ  ಸಿಎಂ ಸಿದ್ದರಾಮಯ್ಯ ಡೆಡ್‌ಲೈನ್ ಫಿಕ್ಸ್ ಮಾಡಿದ್ದಾರೆ.

ಇ- ಖಾತೆ ನೀಡುವ ವಿಚಾರ ಸಂಬಂಧ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಲ್ಕು ಇಲಾಖೆಗಳ ಸಚಿವರ ಜೊತೆ ವೀಡಿಯೊ ಸಂವಾದ ಸಭೆ ನಡೆಯಿತು. ಎಲ್ಲಾ ಜಿಲ್ಲಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಆಯುಕ್ತರು ವೀಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು.

ಒನ್‌ ಟೈಮ್ ಸೊಲ್ಯೂಷನ್‌ ಅಡಿ ಮೂರು ತಿಂಗಳ ಒಳಗೆ ಬಿ ಖಾತಾ ಮಾಡಿಸಿಕೊಳ್ಳಬಬಹುದು. ಆದರೆ ಇನ್ನುಮುಂದೆ ಅನಧಿಕೃತ ಬಡಾವಣೆಗಳಿಗೆ ಅನುಮತಿ ಇಲ್ಲ. ಅನಧಿಕೃತ ಬಡಾವಣೆಗಳು ತಲೆ ಎತ್ತಿದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

11 ಮಹಾ ನಗರಪಾಲಿಕೆಗಳು ಒಳಗೊಂಡಂತೆ 316 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ-ಖಾತಾ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಸ್ವತ್ತಿಗೆ ಹಾಲಿ ಇರುವ ತೆರಿಗೆಗಿಂತ ದುಪ್ಪಟ್ಟು ತೆರಿಗೆ ಕೊಟ್ಟು ಬಿ-ಖಾತಾ ಮಾಡಿಸಿಕೊಳ್ಳಬಹುದು. ರಾಜ್ಯದಲ್ಲಿ ಸುಮಾರಿ 40 ಲಕ್ಷ ಆಸ್ತಿಗಳು ಅನಧಿಕೃತವಾಗಿದ್ದು, 4 ಸಾವಿರ ಕೋಟಿ ಆದಾಯ ನಿರೀಕ್ಷೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ