ಸಿಎಂ ಸಿದ್ದರಾಮಯ್ಯಗೆ ಬಳ್ಳಾರಿ ಗಣಿ ದಣಿಗಳ ಸವಾಲು ನಿಜವಾಗುತ್ತಾ?
ಇದರೊಂದಿಗೆ ಅಂದು ಗಣಿ ದಣಿ ಜನಾರ್ಧನ ರೆಡ್ಡಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸುವಂತೆ ಮಾಡಿದ ಸವಾಲು ನಿಜವಾಗುತ್ತಾ? ಅದಕ್ಕಾಗಿಯೇ ಜನಾರ್ಧನ ರೆಡ್ಡಿ ಸಹೋದರ ಶ್ರೀರಾಮುಲು ಬಾದಾಮಿಯಿಂದ ಕಣಕ್ಕಿಳಿಯುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.
ನಾಳೆ ಶ್ರೀರಾಮುಲು ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ. ರಾಮುಲು ನಾಮಪತ್ರ ಸಲ್ಲಿಕೆ ವೇಳೆ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಉಪಸ್ಥಿತರಿರಲಿದ್ದಾರೆ. ಇದರೊಂದಿಗೆ ಬಾದಾಮಿಯಲ್ಲಿ ಸಿಎಂ-ಗಣಿ ದಣಿಗಳ ನಡುವಿನ ಹೋರಾಟಕ್ಕೆ ವೇದಿಕೆ ಸಿದ್ಧವಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.