ಮಕ್ಕಳೆಂದರೆ ಮುದ್ದು ಅಲ್ಲವೇ. ಅವುಗಳನ್ನು ನೋಡುವುದೇ ಒಂದು ಭಾಗ್ಯ. ಆನೆಗಳು ತಮ್ಮ ಮರಿಗಳನ್ನು ಹಿಂಡು-ಹಿಂಡಾಗಿ ರಕ್ಷಣೆ ಮಾಡ್ತವೆ. ಆನೆ ಶಿಬಿರದಲ್ಲಿ ಆನೆಗಳಿಗಾಗಿ ಒಂದು ಕೆಸರಿನ ಹೊಂಡ ಮಾಡಿರಲಾಗುತ್ತದೆ. ಅವುಗಳಿಗೆ ಸೆಕೆಯಾಗಾಗ ಇದರಲ್ಲಿ ಮಲಗಿಕೊಂಡು ವಿಶ್ರಾಂತಿ ಪಡೆಯಲಿ ಎಂದು ಹೀಗೆ ಹೊಂಡ ಮಾಡಿ ನೀರು ಹರಿಸಿರುತ್ತಾರೆ. ಹೀಗೆ ಮಾಡಿರುವ ಕೆಲಸರಿನ ಹೊಂಡದಲ್ಲಿ ಆನೆ ಮರಿಯೊಂದು ಬಿದ್ದು ಹೊರಳಾಡುತ್ತಿದೆ. ಕೆಸರನ್ನು ಮೈತುಂಬಾ ಹಾಕಿಕೊಂಡು ಆಟವಾಡ್ತಿದೆ. ಕೆಸರಲ್ಲಿ ಬಿದ್ದು ಹೊರಳಾಡುತ್ತಿದೆ. ಬಳಿಕ ತನ್ನ ತಾಯಿ, ಹಾಗೂ ಅದರ ಪರಿವಾರ ಬಂದೊಡನೆ ಕೆಸರಿನಿಂದ ಎದ್ದು ಓಡೋಡಿ ಬಂದಿದೆ.