ಸರ್ಜಾಪುರ ರಸ್ತೆಯ ವಿಪ್ರೋ ಗೇಟ್ ಬಳಿ ಘಟನೆ ನಡೆದಿದ್ದು,ಓವರ್ ಸ್ಟೀಡ್ ನಿಂದಾಗಿ ಮುಂದೆ ಹೋಗುತ್ತಿದ್ದು ಒಂದು ಬೈಕ್, ಒಂದು ಆಟೊ ಹಾಗೂ ಐದು ಕಾರುಗಳಿಗೆ ಡಿಕ್ಕಿ ಹೊಡೆದಿದೆ.ದುರ್ಘಟನೆಯಲ್ಲಿ ಜೊಮೊಟೊ ಡೆಲಿವರಿ ಬಾಯ್ ಸೇರಿ ಇಬ್ಬರಿಗೆ ಗಾಯವಾಗಿದೆ.ಕಾರು ಚಾಲಕನಿಗೂ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂದೆ ಚಲಿಸುತಿದ್ದ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.ಈ ಸಂಬಂಧ ಎಚ್ ಎಸ್ ಆರ್ ಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.