ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ ; ಪೌಡರ್ ಡಬ್ಬಗಳನ್ನು ಹಿಂಪಡೆದ ಕಂಪೆನಿ

ಶನಿವಾರ, 19 ಅಕ್ಟೋಬರ್ 2019 (12:29 IST)
ಬೆಂಗಳೂರು : ಜನಪ್ರಿಯ ಕಂಪೆನಿ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯ ಬೇಬಿ ಪೌಡರ್ ನಲ್ಲಿ ಕಾಲ್ನಾರಿನ ಅಂಶ ಪತ್ತೆಯಾದ ಹಿನ್ನಲೆಯಲ್ಲಿ ಕಂಪೆನಿಯು 33 ಸಾವಿರ ಡಬ್ಬಗಳನ್ನು ಹಿಂಪಡೆಯಲು  ಮುಂದಾಗಿದೆ.




ಆನ್ ಲೈನ್ ನಲ್ಲಿ ಮಾರಾಟವಾಗುತ್ತಿದ್ದ ಜಾನ್ಸನ್ ಆಂಡ್ ಜಾನ್ಸನ್ ಬೇಬಿ ಪೌಡರ್ ನಲ್ಲಿ ಕಾಲ್ನಾರಿನ ಅಂಶ ಪತ್ತೆಯಾಗಿದ್ದು, ಇದು  ಕ್ಯಾನ್ಸರ್ ಕಾರಕವಾಗಿದೆ. ಹಾಗೂ ಹಾನಿಕಾರಕ ಮೆಸೊಥಫಲಿಯಂ ಅಂಶವನ್ನು ಹೊಂದಿದೆ ಎಂದು ಅಮೇರಿಕಾದ ಆರೋಗ್ಯ ನಿಯಂತ್ರಕರು ತಿಳಿಸಿದ್ದಾರೆ.


ಆದ ಕಾರಣ ಕಂಪೆನಿ ಅಮೇರಿಕಾದ ಮಾರುಕಟ್ಟೆಗೆ ಬಿಟ್ಟ ಸುಮಾರು 33 ಸಾವಿರ ಪೌಡರ್ ಡಬ್ಬಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಅಲ್ಲದೇ ಈ ಕಂಪೆನಿಯ ಶಾಂಪೂವಿನಲ್ಲಿಯೂ ಕೂಡ ಕ್ಯಾನ್ಸರ್ ಕಾರಕ ಫಾರ್ಮಲೆಹೈಡ್ ಎಂಬ ರಾಸಾಯನಿಕವಿದೆ ಎಂಬ ಆರೋಪ ಕೇಳಿಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ