ಯತ್ನಾಳ್ ಗೆ ಶೋಕಾಸ್ ನೋಟಿಸ್ ನೀಡಿದ ಹಿನ್ನಲೆ; ಯತ್ನಾಳ್ ಪರ ಬ್ಯಾಟ್ ಬೀಸಿದ ಕೂಡಲ ಸಂಗಮ ಶ್ರೀಗಳು
ಶನಿವಾರ, 5 ಅಕ್ಟೋಬರ್ 2019 (11:51 IST)
ವಿಜಯಪುರ : ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಹೈಕಮಾಂಡ್ ಶೋಕಾಸ್ ನೊಟೀಸ್ ನೀಡಿದ ಹಿನ್ನಲೆ ನೊಟೀಸ್ ಅನ್ನು ಹಿಂಪಡೆಯುವಂತೆ ಕೂಡಲ ಸಂಗಮ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಸಿಎಂ ಯಡಿಯೂರಪ್ಪ ಅವರನ್ನು ಆಲಮಟ್ಟಿಯಲ್ಲಿ ಭೇಟಿ ಮಾಡಿದ ಸ್ವಾಮೀಜಿ, 'ಶಾಸಕ ಯತ್ನಾಳ್ ವಿರುದ್ಧ ಬಿಜೆಪಿ ಕ್ರಮ ಕೈಗೊಂಡರೆ ಇಡೀ ಕನ್ನಡಿಗರು ಯತ್ನಾಳ್ ಪರ ನಿಲ್ಲಲಿದ್ದಾರೆ. ಆದ್ದರಿಂದ ಎಂದು ನೊಟೀಸ್ ಅನ್ನು ಹಿಂಪಡೆಯುವಂತೆ ಮನವಿ ಮಾಡುವುದರ ಮೂಲಕ ಯತ್ನಾಳ್ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಸ್ವಾಮೀಜಿಯವರ ಮನವಿಗೆ ಯಡಿಯೂರಪ್ಪ ಸ್ಪಂದಿಸಿದ್ದು,ಈ ಕುರಿತು ಬಿಜೆಪಿ ಹೈಕಮಾಂಡ್ ಬಳಿ ಮತಾನಾಡುವುದಾಗಿ ಬರವಸೆ ನೀಡಿದ್ದಾರೆ ಎನ್ನಲಾಗಿದೆ.