ರೌಡಿಶೀಟರ್‌ ಕೊಲೆ ಪ್ರಕರಣ, ಒಂದು ದಿನದ ಮಟ್ಟಿಗೆ ಬೈರತಿ ಬಸವರಾಜ್‌ಗೆ ರಿಲೀಫ್‌ ಸಿಕ್ಕಿದ್ದೇಗೆ

Sampriya

ಶುಕ್ರವಾರ, 13 ಫೆಬ್ರವರಿ 2026 (20:25 IST)
ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಬೈರತಿ ಬಸವರಾಜ್‌ಗೆ ಇದೀಗ ಒಂದು ದಿನದ ರಿಲೀಫ್‌ ಸಿಕ್ಕಿದೆ. 

ಇಂದು ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯ ತಪಾಸಣೆ ನಡೆಸಲು ತನಿಖಾಧಿಕಾರಿ ಡಿವೈಎಸ್‌ಪಿ ಗೌತಮ್‌ಗೆ ನ್ಯಾಯಾಧೀಶರು ಸೂಚನೆ ನೀಡಿದರು. 

ಶುಕ್ರವಾರ ವೈದ್ಯಕೀಯ ಪರೀಕ್ಷೆ ನಡೆಸಿ ನಾಳೆ ನ್ಯಾಯಾಧೀಶರ ಮನೆಗೆ ಹಾಜರುಪಡಿಸುವಂತೆ ಸೂಚಿಸಿದರು. 
ಶನಿವಾರ ಪೊಲೀಸ್ ಕಸ್ಟಡಿಯೋ ಅಥವಾ ಜೈಲೋ ಎನ್ನುವುದು ನಿರ್ಧಾರವಾಗಲಿದೆ. ಸಿಐಡಿ ಮೇಲ್ವಿಚಾರಣೆಯಲ್ಲಿ ವೈದ್ಯಕೀಯ
ತಪಾಸಣೆಗೆ ಬೈರತಿ ಬಸವರಾಜ್ ಅವರನ್ನು ಕರೆದೊಯ್ಯಲಾಗಿದೆ. 

ಇನ್ನೂ ಬೈರತಿ ಅವರನ್ನು ಸಿಐಡಿ ಕಸ್ಟಡಿಗೆ ನೀಡದೆ ಮೆಡಿಕಲ್ ಟೆಸ್ಟ್‌ಗೆ ಕರೆದೊಯ್ಯಲಾಯಿತು. ಬೌರಿಂಗ್‌ನಲ್ಲಿ ಹೃದಯ ಸಂಬಂಧಿ ಕಾಯಿಲೆ ಬಗ್ಗೆ ಜಯದೇವದಲ್ಲಿ ಟೆಸ್ಟ್ ನಡೆಸುವಂತೆ ವೈದ್ಯರ ಶಿಫಾರಸು ಹಿನ್ನೆಲೆ ಮಾಜಿ ಸಚಿವರನ್ನು ರವಾನಿಸಲಾಯಿತು.

ಈಗಾಗಲೇ ಹೃದಯ ಸಂಬಂಧಿ ಕಾಯಿಲೆಗೆ ಬೈರತಿ ಬಸವರಾಜ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಅವರಿಗೆ ಈಗಾಗಲೇ ಹೃಯ ಸಂಬಂಧಿ ಕಾಯಿಲೆಯಿಂದ ಸ್ಟಂಟ್ ಅಳವಡಿಸಲಾಗಿದೆ. Aspirin ಮಾತ್ರೆ ಸೇವಿಸುತ್ತಿದ್ದಾರೆ. ಒತ್ತಡ ಹೆಚ್ಚಾದರೆ ಹೃದಯಾಘಾತ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ.

ಮೆಡಿಕಲ್ ಟೆಸ್ಟ್ ರಿಪೋರ್ಟ್ ಸಹಿತ ನಾಳೆ ಹಾಜರುಪಡಿಸಲು ತನಿಖಾಧಿಕಾರಿಗೆ ಕೋರ್ಟ್ ಸೂಚನೆ ನೀಡಿದೆ. ನಾಳೆ ನ್ಯಾಯಾಧೀಶರ ನಿವಾಸಕ್ಕೆ ಸಿಐಡಿ ಹಾಜರು ಪಡಿಸಲಿದೆ. ಹೀಗಾಗಿ, ಕೋರ್ಟ್ ಆದೇಶದ ಬೆನ್ನಲ್ಲೇ ನೇರವಾಗಿ ಜಯದೇವ ಆಸ್ಪತ್ರೆಗೆ ರವಾನಿಸಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ