ಈ ಹಿಂದೆ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪದಡಿ ಮಾಜಿ ಶಾಸಕ ಇದಿನಬ್ಬರ ಪುತ್ರ ಬಿ.ಎಂ ಬಾಷಾ ಮನೆಗೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿ ಅವ್ರ ಪುತ್ರನನ್ನು ಬಂಧಿಸಿತ್ತು. ಅಲ್ಲದೇ, ಈ ಹಿಂದೆಯೂ ಮನೆಯ ಒಬ್ಬ ಸದಸ್ಯೆ ಉಗ್ರ ಸಂಘಟನೆಗಳ ಜೊತೆಗೆ ನಂಟು ಹೊಂದಿ ಸಿರಿಯಾ ದೇಶಕ್ಕೆ ತೆರಳಿದ್ದರು. ಮನೆಯಲ್ಲಿ ಹಿಂದೂ ಧರ್ಮದಿಂದ ಮತಾಂತರಗೊಂಡ ಮಹಿಳೆಯೊಬ್ಬರು ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಇರುವ ಕುರಿತು ಎನ್ ಐಎ ಮಾಹಿತಿ ಕಲೆಹಾಕಿ ಆಕೆಯ ಪಾಸ್ ಪೋರ್ಟ್ ಅನ್ನು ಸೀಜ್ ಮಾಡಿದೆ ಎಂದು ಹೇಳಲಾಗ್ತಿದೆ. ಇದೀಗ ವಿಹಿಂಪ