ಶ್ವಾನದೊಂದಿಗೆ ಬಲೂನ್ ಮಾರುವ ಮಕ್ಕಳ ಆಟ
ರಸ್ತೆ ಬದಿಯಲ್ಲಿ ಬಲೂನ್ ಮಾರುವ ಬಾಲಕನೊಬ್ಬ ಮುದ್ದಾದ ಶ್ವಾನದೊಂದಿಗೆ ಆಟ ಆಡುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಶ್ವಾನ ಕಾರಿನೊಳಗೆ ಇದ್ದರೆ ಬಾಲಕ ರಸ್ತೆ ಬದಿಯಲ್ಲಿ ಬಲೂನ್ ಹಿಡಿದು ನಿಂತಿದ್ದ. ಈ ಬಾಲಕನೊಂದಿಗೆ ಇನ್ನೊಬ್ಬ ಪುಟಾಣಿ ಕೂಡಾ ಇದ್ದ. ಇಬ್ಬರೂ ಈ ಶ್ವಾನವನ್ನು ಮುದ್ದಿಸುತ್ತಿದ್ದ ಪರಿಯೇ ಸುಂದರ. ಶ್ವಾನ ಕೂಡಾ ಈ ಮಕ್ಕಳೊಂದಿಗೆ ಅಷ್ಟೇ ಆಪ್ತವಾಗಿ ಇತ್ತು. ಈ ಆಟ, ಈ ಪ್ರೀತಿಯನ್ನು ನೋಡುವಾಗಲೇ ಖುಷಿಯಾಗುತ್ತದೆ. ಒಂದು ಕ್ಷಣ ಎಲ್ಲಾ ನೋವನ್ನು ಮರೆಸಿ ಬಿಡುತ್ತದೆ ಈ ಬಾಲಕನ ಖುಷಿ ಮತ್ತು ಅರಳಿದ ನಗು. ಈ ನಿರ್ಮಲ ಪ್ರೀತಿಯನ್ನು ಶ್ವಾನ ಕೂಡಾ ಎಷ್ಟು ಆನಂದಿಸುತ್ತಿತ್ತು ಎಂಬುದಕ್ಕೆ ಅದರ ಸುಂದರ ಪ್ರತಿಕ್ರಿಯೆಯೇ ಸಾಕ್ಷಿ. `ಪ್ರೀತಿಯೇ ನಮ್ಮೆಲ್ಲರ ಆಧಾರ' ಎಂಬ ಕ್ಯಾಪ್ಶನ್‌ನೊಂದಿಗೆ ದೀಪಾನ್ಶು ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಹಜವಾಗಿಯೇ ಈ ಅಪೂರ್ವ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ. ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿ ಈ ವಿಡಿಯೋ ಯಶಸ್ವಿಯಾಗಿದೆ.ಇದೊಂದು ನಿರ್ಮಲ ಪ್ರೀತಿ... ಈ ಕ್ಷಣವೇ ಹೃದಯಸ್ಪರ್ಶಿ ನೋಡುತ್ತಿದ್ದರೆ ಮತ್ತೆ ಮತ್ತೆ ನೋಡಬೇಕೆನಿಸುವ ಕ್ಷಣವಿದು.