ಮಡಿಕೇರಿ ಚಲೋಗೆ ನಿಷೇಧಾಜ್ಞೆ ಅಡ್ಡಿ!
ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಜಿಲ್ಲಾಡಳಿತ ಬುಧವಾರದಿಂದ ಶನಿವಾರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಿದೆ. ಹೀಗಾಗಿ ಶುಕ್ರವಾರ ಮಡಿಕೇರಿ ಪ್ರವೇಶ ಮಾಡುವ ಪ್ರಯತ್ನ ಮಾಡಿ ಕೈ ನಾಯಕರು ಅರೆಸ್ಟ್ ಆಗುತ್ತಾರಾ? ಅಥವಾ ನಿಷೇಧಾಜ್ಞೆ ಕಾರಣ ನೀಡಿ ಮಡಿಕೇರಿ ಮುತ್ತಿಗೆ ಕೈ ಬಿಡಲು ತೀರ್ಮಾನ ಮಾಡ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಒಂದು ವೇಳೆ ನಿಷೇಧಾಜ್ಞೆ ಜಾರಿಯಾದರೆ ಪ್ರತಿಭಟನೆ ಕೈ ಬಿಡುವುದು ಉತ್ತಮ ಎನ್ನುವುದು ಬಹುತೇಕ ಕೈ ನಾಯಕರ ಅಭಿಪ್ರಾಯವಾಗಿತ್ತು. ಆದರೆ ತಮ್ಮ ನಿಲುವು ಏನು ಎನ್ನುವುದನ್ನು ಪಕ್ಷದ ನಾಯಕರಿಗೆ ಇನ್ನೂ ಸಿದ್ದರಾಮಯ್ಯ ತಿಳಿಸಿಲ್ಲ.
ಹೀಗಾಗಿ ಘೋಷಣೆ ಮಾಡಿ ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ ಮಡಿಕೇರಿ ಹೋಗಲೇಬೇಕು ಅನ್ನೋ ಹಟಕ್ಕೆ ಬೀಳ್ತಾರಾ ಎನ್ನುವುದು ಶೀಘ್ರವೇ ಇತ್ಯರ್ಥವಾಗಲಿದೆ.