ಬಂದ್​​​ ಹಿನ್ನೆಲೆ ಟ್ರಾಫಿಕ್​ ಜಾಮ್​

ಸೋಮವಾರ, 11 ಸೆಪ್ಟಂಬರ್ 2023 (16:00 IST)
ಖಾಸಗಿ ಸಾರಿಗೆ ಚಾಲಕರ ಪ್ರತಿಭಟನೆಯಿಂದಾಗಿ ಬೆಂಗಳೂರಿನ ವಿವಿಧೆಡೆ ಟ್ರಾಫಿಕ್​ ಜಾಮ್ ಉಂಟಾಯ್ತು.. ಬೆಂಗಳೂರಿನಲ್ಲಿ ವಾಹನ ಸವಾರರು ಇನ್ನಿಲ್ಲದ ಪರದಾಟ ನಡೆಸಿದ್ರು.. ರಸ್ತೆಗಳಲ್ಲಿ ಪ್ರತಿಭಟನಾಕಾರರ ಮೆರವಣಿಗೆ ಸಾಗಿದ್ದು, ಎಲ್ಲೆಡೆ ಫುಲ್‌ ಟ್ರಾಫಿಕ್ ಬಿಸಿ ತಟ್ಟಿದೆ. ಯಶವಂತಪುರ, ಮಲ್ಲೇಶ್ವರ, ಮೆಜೆಸ್ಟಿಕ್‌ನಲ್ಲಿ ವಾಹನಗಳು ಜಾಮ್ ಆಗಿದ್ದು, ಆನಂದ್‌ ರಾವ್‌ ಸರ್ಕಲ್ ಫ್ಲೈಓವರ್‌ ಮೇಲೂ ಟ್ರಾಫಿಕ್ ಜಾಮ್​ ಉಂಟಾಯ್ತು.. ಫ್ರೀಡಂ ಪಾರ್ಕ್‌ ರಸ್ತೆಯಲ್ಲಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ