ಭಾನುವಾರ ಮಧ್ಯರಾತ್ರಿಯಿಂದ್ಲೇ ಬಂದ್ ಬಿಸಿ

ಸೋಮವಾರ, 11 ಸೆಪ್ಟಂಬರ್ 2023 (07:05 IST)
ಬೆಂಗಳೂರು: ಸೋಮವಾರ ಬೆಂಗಳೂರು ಭಾಗಶಃ ಬಂದ್ ಆಗುವ ಸಂಭವ ಇದೆ. ಕಾರಣ ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್ಗೆ ಕರೆ ನೀಡಿದೆ.

ಇಂದು ಮಧ್ಯರಾತ್ರಿಯಿಂದ್ಲೇ ಬಂದ್ ಬಿಸಿ ಶುರುವಾಗಿದೆ, ಆಟೋ, ಟ್ಯಾಕ್ಸಿ, ಗೂಡ್ಸ್, ಖಾಸಗಿ ಬಸ್ ಸೇರಿ ವಿವಿಧ ಮಾದರಿಯ ಖಾಸಗಿ ಸಾರಿಗೆಯ ವಾಹನಗಳು ರಸ್ತೆಗೆ ಇಳಿಯಲ್ಲ. ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಒಕ್ಕೂಟ ಆಯೋಜಿಸಿದೆ. ಬಂದ್ ಯಶಸ್ಸಿಗಾಗಿ ಒಕ್ಕೂಟ ಪಣತೊಟ್ಟಿದೆ.

ಬೆಂಗಳೂರಿನ ಕಲಾಸಿಪಾಳ್ಯ ಖಾಸಗಿ ಬಸ್ ನಿಲ್ದಾಣದ ಒಂದರಲ್ಲೇ  250ಕ್ಕೂ ಹೆಚ್ಚು ಬಸ್ ಸ್ತಬ್ದವಾಗಲಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ನೆರೆಯ ಜಿಲ್ಲೆಗಳ ಖಾಸಗಿ ಬಸ್ ಮಾಲೀಕರು ಬಂದ್ಗೆ ಬೆಂಬಲ ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ