ಬಂದ್ ಹಿನ್ನೆಲೆ-ಯಲಹಂಕ ,ಏಪೋರ್ಟ್ ರಸ್ತೆ ಖಾಲಿ ಖಾಲಿ

ಸೋಮವಾರ, 11 ಸೆಪ್ಟಂಬರ್ 2023 (13:13 IST)
ಬೆಂಗಳೂರಿನಲ್ಲಿ ಖಾಸಗಿ ಸಂಚಾರ ಬಂದ್ ಹಿನ್ನಲೆ ಸಾವಿರಾರು ವಾಹನ ಟ್ಯಾಕ್ಸಿಗಳ ಸಂಚಾರದಿಂದ ಸದಾ ರಷ್ ಇರುತ್ತಿದ್ದ ರಸ್ತೆಗಳು ಖಾಲಿ ಖಾಲಿ ಹೊಡೆಯುತ್ತಿದೆ.ಸಾವಿರಾರು ವಾಹನಗಳ ಬದಲಿಗೆ ನೂರಾರು ವಾಹನದಿಂದ ರಸ್ತೆ ಕೂಡಿದೆ.ಬೆಂಗಳೂರು ಏರ್ಪೋರ್ಟ್ ರಸ್ತೆ ಯಲಹಂಕದ ಕಾಫಿ ಡೇ ಜಂಕ್ಷನ್ ಬಳಿ ರಸ್ತೆ ಖಾಲಿ ಖಾಲಿ ಇದೆ.ಏರ್ಪೋರ್ಟ್ ಮತ್ತು ದೇವನಹಳ್ಳಿ, ಚಿಕ್ಕಬಳ್ಳಾಪುರಕ್ಕೆ ತೆರಳೊ‌ ಜನ ಬೈಕ್, ಕಾರು ಹತ್ತಿ ಪ್ರಯಾಣ ಮಾಡ್ತಿದ್ದಾರೆ.ಯಲಹಂಕ ಕಾಫಿ ಡೇ ಜಂಕ್ಷನ್ ಬಳಿ ಒಮ್ಮೊಮ್ಮೆ ಟ್ರಾಫಿಕ್ ಜಾಮ್ ಸಹ ಅಗ್ತಿತ್ತು.ಬೆಂಗಳೂರು ಬಂದ್ ಹಿನ್ನಲೆ ರಾಷ್ಟ್ರೀಯ ಹೆದ್ದಾರಿ ಎರಡೂ ಕಡೆ ರಸ್ತೆ ಬಿಕೋ ಎನ್ನುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ