ಅಕ್ರಮ ಸಂಬಂಧ ಆಪ್ ಬಳಸೋದ್ರಲ್ಲಿ ಬೆಂಗಳೂರಿಗರೇ ನಂ.1

Krishnaveni K

ಮಂಗಳವಾರ, 28 ಜನವರಿ 2025 (11:56 IST)
ಬೆಂಗಳೂರು: ಅಕ್ರಮ ಸಂಬಂಧ ಬೆಳೆಸುವ ಆಪ್ ಬಳಸುವುದರಲ್ಲಿ ಬೆಂಗಳೂರು ದೇಶಕ್ಕೇ ನಂ.1 ಎಂಬ ವಿಚಾರ ಬೆಳಕಿಗೆ ಬಂದಿದೆ. ಇದರಲ್ಲಿ ಸುಮಾರು 30 ಲಕ್ಷ ಭಾರತೀಯರು ಹೆಸರು ನೊಂದಾಯಿಸಿದ್ದಾರೆ ಎನ್ನಲಾಗಿದೆ.

ವಿವಾಹೇತರ ಸಂಬಂಧ ನಿಜಕ್ಕೂ ಕುಟುಂಬವನ್ನು, ಮನಸ್ಸುಗಳನ್ನು ಒಡೆಯುತ್ತದೆ. ಅದೂ ಭಾರತದಂತಹ ದೇಶದಲ್ಲಿ ವಿವಾಹ ಸಂಬಂಧಕ್ಕೆ ತುಂಬಾ ಪಾವಿತ್ರ್ಯತೆಯಿದೆ. ಆದರೆ ಇಲ್ಲಿಯೇ ಈಗ ಅಕ್ರಮ ಸಂಬಂಧ ಬೆಳೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಆತಂಕಕಾರಿ ವಿಚಾರ.

ವಿವಾಹೇತರ ಡೇಟಿಂಗ್ ಅಪ್ಲಿಕೇಷನ್ ಗ್ಲೀಡನ್ ಬಿಡುಗಡೆ ಮಾಡಿರುವ ವರದಿ ಪ್ರಕಾರ ಕಳೆದ ವರ್ಷ ಈ ಅಪ್ಲಿಕೇಷನ್ ಬಳಸುವವರ ಸಂಖ್ಯೆಯಲ್ಲಿ ಶೇ.270 ರಷ್ಟು ಏರಿಕೆಯಾಗಿದೆ. ವಿಶೇಷವೆಂದರೆ ಹೊಸ ಬಳಕೆದಾರರ ಪೈಕಿ ಶೇ.128 ರಷ್ಟು ಮಹಿಳೆಯರೇ ಇದ್ದಾರೆ!

ಶೇ.40 ರಷ್ಟು 35-40 ವರ್ಷ  ವಯಸ್ಸಿನೊಳಗಿನ ವಿವಾಹಿತ ಮಹಿಳೆಯರಿದ್ದಾರೆ. ಭಾರತದಲ್ಲಿ ಸುಮಾರು 30 ಲಕ್ಷದಷ್ಟು ಮಂದಿ ಈ ಆಪ್ ಗೆ ಬಳಕೆದಾರರಾಗಿದ್ದಾರೆ. ಅದರಲ್ಲಿ ಶೇ.20 ರಷ್ಟು ಬೆಂಗಳೂರಿಗರೇ ಇದ್ದು, ನಂ.1 ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಮುಂಬೈ, ಕೋಲ್ಕತ್ತಾ, ದೆಹಲಿಯಂತಹ ಮಹಾನಗರಗಳ ಹೆಸರುಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ