ದೇವನಹಳ್ಳಿ: ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿಯಲ್ಲಿ ಇಬ್ಬರನ್ನು ಕಿಡ್ನಾಪ್ ಮಾಡಿದ್ದಾರೆ.
ಪೊಲೀಸರ ಸೋಗಿನಲ್ಲಿ ಬಂದು ಕಂಬಿ ಅಂಗಡಿ ಮಾಲೀಕ ರಾಜು ನಾಯಕ್ ಮತ್ತು ಬಾಬು ಎಂಬುವವರನ್ನು ಅಪಹರಣ ಮಾಡಿದ್ದಾರೆ. ಆರೋಪಿಗಳು ವೈಟ್ಫೀಲ್ಡ್ ಪೊಲೀಸರೆಂದು ಹೇಳಿಕೊಂಡು ವಿಚಾರಣೆಗೆ ಬರುವಂತೆ ಹೇಳಿ ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್ ಮಾಡಿ 8.5 ಟನ್ ಕಬ್ಬಿಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಳಾಗಿದೆ.
ಅಪರಿಚಿತರು ನಿನ್ನೆ ಮಧ್ಯಾಹ್ನ ರಾಜು ನಾಯಕ್ ಮತ್ತು ಸಂಜೆ ಬಾಬು ಎಂಬುವರನ್ನ ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾರೆ. ಮೊದಲಿಗೆ ವೈಟ್ಫೀಲ್ಡ್ ಪೊಲೀಸರು ಅಂತ ಹೇಳಿದ್ದಾರೆ. ನಂತರ ವೈಟ್ಫೀಲ್ಟ್ ಪೊಲೀಸ್ ಠಾಣೆ ಬಳಿ ಕುಟುಂಬಸ್ಥರು ಹೋಗಿ ವಿಚಾರಿಸಿದಾಗ ನಾವಲ್ಲ ಅಂತ ಹೇಳಿದ್ದರು. ಕಿಡ್ನಾಪ್ ಮಾಡಿಕೊಂಡು ಕಾರಿನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಿಳಿ ಕಾರಿನಲ್ಲಿ ಅಪಹರಣ ಮಾಡಿದ್ದಾರೆ.
ಕಿಡ್ನಾಪ್ ಕೇಸ್ಗೆ ಟ್ವಿಸ್ಟ್
ಅಪಹರಣ ಪ್ರಕರಣಕ್ಕೆ ಇದೀಗೆ ಟ್ವಿಸ್ಟ್ ಸಿಕ್ಕಿದೆ. ಎಪ್‌ಐಆರ್ ದಾಖಲಾದ ನಂತರ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಆನೇಕಲ್ ಪೊಲೀಸರು ರವಿ ಮತ್ತು ಬಾಬು ಇಬ್ಬರನ್ನು ಬಂಧಿಸಿದ್ದಾರೆ. ಅಪಹರಣದ ರೀತಿಯಲ್ಲಿ ಇಬ್ಬರನ್ನು ಪೊಲೀಸರು ಕರೆದುಕೊಂಡು ಹೋಗಿದ್ದರು. ಸ್ಥಳೀಯ ಆವಲಹಳ್ಳಿ ಪೊಲೀಸರು ಮತ್ತು ಕುಟುಂಬಸ್ಥರಿಗೆ ಮಾಹಿತಿ ನೀಡದೆ ಪೊಲೀಸರು ಕರೆದು ಹೋಗಿದ್ದರು. ಆವಲಹಳ್ಳಿ ಪೊಲೀಸರು ಅಪಹರಣ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮಾಹಿತಿ ತಿಳಿದುಬಂದಿದೆ.