ಲಸಿಕೆಯ ಮಹತ್ವದ ಅಂಶ?

ಶನಿವಾರ, 12 ಫೆಬ್ರವರಿ 2022 (13:28 IST)
‘ಭಾರತ್‌ ಬಯೋಟೆಕ್‌’ನ ಸ್ವದೇಶಿ ಉತ್ಪಾದಿತ ಕೋವಿಡ್‌ ಲಸಿಕೆ ‘ಕೋವ್ಯಾಕ್ಸಿನ್‌’ ರೋಗಲಕ್ಷಣ ಹೊಂದಿದ ಕೊರೋನಾ ಸೋಂಕಿತರ ಮೇಲೆ ಕೇವಲ ಶೇ.50ರಷ್ಟುಪರಿಣಾಮಕಾರಿಯಾಗಿ ಹೊರಹೊಮ್ಮಿದೆ.
 
‘ಲ್ಯಾನ್ಸೆಟ್‌’ ವೈದ್ಯಕೀಯ ನಿಯತಕಾಲಿಕೆಯ ಅಧ್ಯಯನ ಹೇಳಿದೆ. ಈ ಮುನ್ನ 3ನೇ ಹಂತದ ಪ್ರಯೋಗದ ಬಳಿಕ ಕೋವ್ಯಾಕ್ಸಿನ್‌ ಶೇ.77.8ರಷ್ಟುಪರಿಣಾಮಕಾರಿ ಎಂದು ಸಾಬೀತಾಗಿತ್ತು ಎಂದು ‘ಲ್ಯಾನ್ಸೆಟ್‌’ನಲ್ಲಿ ವರದಿಯಾಗಿತ್ತು.

ಆದರೆ ಈಗ ಕೋವ್ಯಾಕ್ಸಿನ್‌ ಎರಡೂ ಡೋಸ್‌ ಪಡೆದ ಲಸಿಕೆ ಪಡೆದ ದಿಲ್ಲಿ ಏಮ್ಸ್‌ ಆಸ್ಪತ್ರೆಯ ಸಿಬ್ಬಂದಿಯನ್ನು ‘ರಿಯಲ್‌ ಟೈಂ’ ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಈ ವೇಳೆ ರೋಗಲಕ್ಷಣ ಉಳ್ಳ ಸೋಂಕಿತರ ಮೇಲೆ ಲಸಿಕೆ ಶೇ.50ರಷ್ಟುಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ‘ಲ್ಯಾನ್ಸೆಟ್‌’ನಲ್ಲಿ ತಿಳಿಸಲಾಗಿದೆ. 23 ಸಾವಿರ ಏಮ್ಸ್‌ ಸಿಬ್ಬಂದಿಗೆ ಜನವರಿ-ಫೆಬ್ರವರಿಯಲ್ಲೇ 28 ದಿನಗಳ ಅಂತರದಲ್ಲಿ ಎರಡೂ ಡೋಸ್‌ ಕೋವ್ಯಾಕ್ಸಿನ್‌ ಲಸಿಕೆ ನೀಡಲಾಗಿತ್ತು.

ಈ ಪೈಕಿ ಡೆಲ್ಟಾ ತಳಿ ಅಬ್ಬರ ಹೆಚ್ಚಿದ ಅವಧಿಯಾದ ಏ.15ರಿಂದ ಮೇ 15ರವರೆಗೆ 2714 ಸಿಬ್ಬಂದಿಯನ್ನು ಕೋವಿಡ್‌ ಟೆಸ್ಟ್‌ಗೆ ಒಳಪಡಿಸಲಾಯಿತು. ಈ ವೇಳೆ 1617 ಸಿಬ್ಬಂದಿಗೆ ರೋಗಲಕ್ಷಣವುಳ್ಳ ಕೊರೋನಾ ಅಂಟಿದ್ದು ಖಚಿತಪಟ್ಟಿತು.

 1097 ಸಿಬ್ಬಂದಿಗೆ ಪರೀಕ್ಷೆಯಲ್ಲಿ ನೆಗೆಟಿವ್‌ ಬಂತು. ಇದರಿಂದಾಗಿ ರೋಗಲಕ್ಷಣವುಳ್ಳವರ ಮೇಲೆ ಕೋವ್ಯಾಕ್ಸಿನ್‌ ಶೇ.50ರಷ್ಟು ಪರಿಣಾಮ ಬೀರಿದೆ ಎಂದು ಸಾಬೀತಾಯಿತು ಎಂದು ಅಧ್ಯಯನ ವಿವರಿಸಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ