ರಾಜಧಾನಿ ಲಾಕ್ ಬಹುತೇಕ ಖಚಿತ...!!

ಭಾನುವಾರ, 2 ಜನವರಿ 2022 (15:02 IST)
ಸಿಲಿಕಾನ್ ಸಿಟಿ ಬೆಂಗಳೂರು ಮತ್ತೆ ಲಾಕ್ ಆಗುವುದು ಬಹುತೇಕ ಖಚಿತವಾಗಿದೆ. ರಾಜ್ಯ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೋವಿಡ್, ಒಮಿಕ್ರಾನ್ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಕಠಿಣ ನಿಯಮ ಜಾರಿಗೆ ಸರ್ಕಾರ ಮುಂದಾಗಿದೆ.
 
ಬೆಂಗಳೂರಿನಲ್ಲಿ ನಿನ್ನೆ 850 ಕೋವಿಡ್ ಪ್ರಕರಣ ದಾಖಲಾಗಿದ್ದರೆ ಇಂದು 900ಕ್ಕೂ ಹೆಚ್ಚು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿದೇಶದಿಂದ ಆಗಮಿಸಿದ್ದ 6 ಜನರಲ್ಲಿ ಕೋವಿಡ್ ದೃಢಪಟ್ಟಿದ್ದು, ಒಮಿಕ್ರಾನ್ ಶಂಕೆ ಹಿನ್ನೆಲೆಯಲ್ಲಿ ಸೋಂಕಿತರ ಸ್ಯಾಂಪಲ್ ಜಿನೋಮಿಕ್ ಸೀಕ್ವೆನ್ಸಿಗೆ ರವಾನಿಸಲಾಗಿದೆ.
 
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ಕೇಸ್ ಉಲ್ಬಣಗೊಳ್ಳುತ್ತಿದೆ. ಕೇಂದ್ರ ಸರ್ಕಾರ ಪಟ್ಟಿಮಾಡಿ ಕಳುಹಿಸಿರುವ ರೆಡ್ ಝೋನ್ ನಗರಗಳಲ್ಲಿ ಬೆಂಗಳೂರು ಕೂಡ ಇದೆ. ಹಾಗಾಗಿ ಕಠಿಣ ನಿಯಮದ ಜೊತೆಗೆ ಲಾಕ್ ಡೌನ್ ನಂತಹ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಕೂಡ ಇಲ್ಲದಿಲ್ಲ ಎಂದಿದ್ದಾರೆ.
 
ಕೋವಿಡ್ ಎರಡನೆ ಅಲೆ ಸಂದರ್ಭದಲ್ಲಿ ಕೊಂಚ ನಿರ್ಲಕ್ಷದಿಂದ ರಾಜ್ಯ ಹಾಗೂ ದೇಶದಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಹಂತ ತಲುಪಿತು. ಸಂಭವಿಸಿದ ಸಾವು-ನೋವಿನ ಭೀಕರತೆ ಬಗ್ಗೆ ಎಲ್ಲರಿಗೂ ಅರಿವಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ