ಪ್ರಾಣ ರಕ್ಷಣೆಗೆ ಅರ್ಧಗಂಟೆ ಹೋರಾಡಿದರು! ನೋಡುತ್ತಿದ್ದಂತೇ ಪ್ರಾಣ ಬಿಟ್ಟರು!

ಶನಿವಾರ, 9 ಸೆಪ್ಟಂಬರ್ 2017 (08:44 IST)
ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ರಾತ್ರಿ ಸುರಿದ ಮಳೆದ ಅವಾಂತರವೆಬ್ಬಿಸಿದೆ. ಕಾರಿನಲ್ಲಿದ್ದ ಮೂವರು ಸೇರಿದಂತೆ ಒಟ್ಟು ನಾಲ್ಕು ಮಂದಿ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.

 
ಮಿನರ್ವ ಸರ್ಕಲ್ ಬಳಿ ಕಾರಿನಲ್ಲಿ ಕುಳಿತಿದ್ದ ಒಂದೇ ಕುಟುಂಬದ ಮೂವರು ಮರ ಉರುಳಿ ಬಿದ್ದ ಪರಿಣಾಮ ಹೊರ ಬರಲಾಗದೆ ಉಸಿರುಗಟ್ಟಿಸಾವನ್ನಪ್ಪಿದ್ದಾರೆ. ಕಾರಿನ ಮುಂದಿನ ಸೀಟಿನಲ್ಲಿದ್ದ ಇಬ್ಬರು ಗಾಜು ಒಡೆದು ಹೊರ ಬಂದು ಪ್ರಾಣ ರಕ್ಷಿಸಿಕೊಂಡಿದ್ದಾರೆ.

ಹಿಂಬದಿಯಲ್ಲಿ ಕೂತಿದ್ದ ಮೂವರು ಸುಮಾರು ಅರ್ಧ ಗಂಟೆಗಳ ಕಾಲ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದರಾದರೂ ಹೊರಬರಲಾಗದೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ಇವರನ್ನು ರಕ್ಷಿಸಲು ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ಅಗ್ನಿ ಶಾಮಕ ದಳದವರು  ಬರುವಷ್ಟರಲ್ಲಿ ಮೂವರ ಪ್ರಾಣ ಪಕ್ಷಿ ಹೊರಟು ಹೋಗಿತ್ತು.

ಮೃತರನ್ನು ಭಾರತಿ, ಜಗದೀಶ್ ಮತ್ತು ರಮೇಶ್ ಎಂದು ಗುರುತಿಸಲಾಗಿದೆ. ಇನ್ನೊಂದು ದುರಂತದಲ್ಲಿ ವರುಣ್ ಎಂಬ ಯುವಕ ನಡೆದಾಡುಕೊಂಡು ಹೋಗುತ್ತಿದ್ದಾಗ ಫುಟ್ ಪಾತ್ ಮೇಲೆ ಹಾಕಿದ್ದ ಸ್ಲಾಬ್ ಜಾರಿ ಡ್ರೈನೇಜ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಇಂದು ಬೆಳಗಿನ ಜಾವ ಆತನ ಶವ ಪತ್ತೆಯಾಗಿದೆ.

ಇದನ್ನೂ ಓದಿ.. ಪಾಕ್ ಕ್ರಿಕೆಟರ್ ಜತೆ ಮದುವೆ ಸುದ್ದಿ ಬಗ್ಗೆ ಬೆಡಗಿ ತಮನ್ನಾ ಹೇಳಿದ್ದೇನು?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ