ಬೆಂಗಳೂರು: ಫುಟ್ ಪಾತ್ ಮೇಲೆ ವಾಹನ ಚಲಾಯಿಸಿದ್ರೆ ಇನ್ನು ಈ ಶಿಕ್ಷೆ ಗ್ಯಾರಂಟಿ

Krishnaveni K

ಸೋಮವಾರ, 3 ಫೆಬ್ರವರಿ 2025 (11:15 IST)
Photo Credit: X
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಯಲ್ಲಿ ಜಾಮ್ ಇದೆಯೆಂದು ಫುಟ್ ಪಾತ್ ಮೇಲೆ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋಗುವವರನ್ನು ನೋಡುತ್ತೇವೆ. ಇನ್ನು ಮುಂದೆ ಹೀಗೆ ಮಾಡಿದ್ರೆ ಈ ಶಿಕ್ಷೆ ಗ್ಯಾರಂಟಿ.

ರಸ್ತೆ ವಾಹನಗಳಿಂದ ತುಂಬ ಬ್ಲಾಕ್ ಆಗಿದ್ದಾಗ ಕೆಲವು ದ್ವಿಚಕ್ರ ಸವಾರರು ನೇರವಾಗಿ ಫುಟ್ ಪಾತ್ ಗೇ ಗಾಡಿ ನುಗ್ಗಿಸಿ ಮುಂದೆ ಸಾಗುತ್ತಾರೆ. ಆದರೆ ಇನ್ನು ಮುಂದೆ ಹೀಗೆ ಮಾಡಿದರೆ ಟ್ರಾಫಿಕ್ ಪೊಲೀಸರು ಡ್ರೈವಿಂಗ್ ಲೈಸೆನ್ಸ್ ಅಮಾನತು ಮಾಡಲು ನಿರ್ಧರಿಸಿದ್ದಾರೆ.

ಇದುವರೆಗೆ ಈ ರೀತಿ ತಪ್ಪು ಮಾಡಿದರೆ ದಂಡ ವಿಧಿಸಲಾಗುತ್ತಿತ್ತು. ಆದರೆ ಆದಕ್ಕೂ ಸವಾರರು ಜಗ್ಗುತ್ತಿರಲಿಲ್ಲ. ಹೀಗಾಗಿ ಇನ್ನು ಮುಂದೆ ಫುಟ್ ಪಾತ್ ಮೇಲೆ ವಾಹನ ಚಲಾಯಿಸಿದವರ ಲೈಸೆನ್ಸೇ ರದ್ದು ಮಾಡಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಖಡಕ್ ಸೂಚನೆ ಕೊಟ್ಟಿದ್ದಾರೆ.

ಪಾದಚಾರಿ ರಸ್ತೆಯಲ್ಲಿ ವಾಹನ ಚಲಾಯಿಸುವುದರಿಂದ ಫುಟ್ ಪಾತ್ ಮೇಲೆ ನಡೆದಾಡುವವರಿಗೆ ತೊಂದರೆಯಾಗುತ್ತದೆ. ಇನ್ನೀಗ ಮೊದಲ ಬಾರಿಗೆ ಈ ರೀತಿ ತಪ್ಪು ಮಾಡಿ ಸಿಕ್ಕಿಬಿದ್ದರೆ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಅದೇ ತಪ್ಪು ಮಾಡಿದಲ್ಲಿ ಲೈಸೆನ್ಸ್ ಅಮಾನತು ಮಾಡಬೇಕಾಗುತ್ತದೆ ಎಂದು ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ