ಬಾಡಿಗೆ ದಾರರಿಗೆ ಶಾಕ್ ನೀಡಿದ ಬೆಂಗಳೂರು ವಿವಿ

ಶುಕ್ರವಾರ, 25 ನವೆಂಬರ್ 2022 (19:48 IST)
ಬೆಂಗಳೂರು ವಿವಿ ಜಾಗದ ಬಾಡಿಗೆ ಶೇ.10 ರಷ್ಟು ಹೆಚ್ಚಳವಾಗಿದ್ದು,ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಈಗಾಗಲೇ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಿಗೆ ಗುತ್ತಿಗೆ ಆದರದ ಮೇಲೆ ಜಾಗ ನೀಡಲಾಗಿದೆ.ಭೂಮಿಯ ಬಾಡಿಗೆ ಮೊತ್ತ ಪ್ರತಿ ವರ್ಷ ಶೇಕಡ 10ರಷ್ಟು ಹೆಚ್ಚಿಸಲು ಸಿಂಡಿಕೇಟ್‌ ಸಭೆಯಲ್ಲಿ ನಿರ್ಧಾರವಾಗಿದೆ.ಬರುವ ಡಿಸೆಂಬರ್ 1ರಿಂದಲೇ ಜಾರಿಗೆ ಬರಲಿದೆ.
 
ಪ್ರತಿ ಎಕರೆಗೆ ವಾರ್ಷಿಕ 50 ಸಾವಿರದಂತೆ ಭೂಮಿ ಗುತ್ತಿಗೆಯ ಬಾಡಿಗೆ ದರ ನಿಗದಿಯಾಗಿದ್ದು,ಡಿ.1ರಿಂದ ಶೇ.10 ರಷ್ಟು ಬಾಡಿಗೆ ದರ ಹೆಚ್ಚಳವಾಗಲಿದೆ.ಹಾಗಾಗಿ ಕ್ಯಾಂಪಸ್ ಜಾಗವನ್ನು ಗುತ್ತಿಗೆ ಪಡೆದುಕೊಂಡಿರುವ ಎಲ್ಲ ಸಂಸ್ಥೆಗಳು ಹೆಚ್ಚುವರಿ ಬಾಡಿಗೆ ದರ ಪಾವತಿಸಬೇಕು.ಜತೆಗೆ ತಮ್ಮ ಭೂ ಗುತ್ತಿಗೆ ಪತ್ರಗಳನ್ನು ಶೇ.10ರಷ್ಟು ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಿಕೊಳ್ಳಬೇಕು.ವಿವಿ ಅಧಿಕಾರಿಗಳ ಮಾಹಿತಿ ಪ್ರಕಾರ ಜ್ಞಾನ ಭಾರತಿ ಕ್ಯಾಂಪಸ್‌ನ 1112 ಎಕರೆ ಭೂಮಿಯಲ್ಲಿ ಐಸೆಕ್‌ ಸಂಸ್ಥೆಗೆ 38.2 ಎಕರೆ, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯಕ್ಕೆ (ಬೇಸ್) 40 ಎಕರೆ, ಸಾಯ್ ಸಂಸ್ಥೆಗೆ 81.2 ಎಕರೆ, ರಾಷ್ಟ್ರೀಯ ಕಾನೂನು ಶಾಲೆ- 24 ಎಕರೆ, ಕಲಾ ಗ್ರಾಮ 20 ಎಕರೆ, ಆಟೋಮ್ಯಾಟಿಕ್ ಎನರ್ಗಿ-15 ಎಕರೆ, ಬಯೋ ಪಾರ್ಕ್‌ ಗೆ - 307 ಎಕರೆ ಭೂಮಿಯನ್ನು ಭೂಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ.ಪ್ರತಿ ಎಕರೆಗೆ ಪ್ರತಿ ವರ್ಷ 50 ಸಾವಿರದಂತೆ ಈ ಸಂಸ್ಥೆಗಳು ವಿವಿಗೆ ಲೀಸ್‌ ಮೊತ್ತ ಪಾವತಿಸಬೇಕಾಗಿರುವುದರಿಂದ ಬಾಡಿಗೆ ದರರು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ