ಬೆಂಗಳೂರಿಗರಿಗೆ ಒಂದೇ ದಿನ ಹಾಲು, ನೀರು ದರ ಏರಿಕೆ ಶಾಕ್

Krishnaveni K

ಗುರುವಾರ, 27 ಮಾರ್ಚ್ 2025 (11:09 IST)
ಬೆಂಗಳೂರು: ಬೆಂಗಳೂರಿಗೆ ಇಂದು ಒಂದೇ ದಿನದಲ್ಲಿ ಡಬಲ್ ಶಾಕ್ ಎದುರಾಗಲಿದೆ. ಹಾಲು ಮತ್ತು ನೀರಿನ ದರ ಏರಿಕೆ ಕುರಿತು ಇಂದೇ ಅಂತಿಮ ತೀರ್ಮಾನವಾಗುವ ಸಾಧ್ಯತೆಯಿದೆ.

ಕಳೆದ ಕೆಲವು ದಿನಗಳಿಂದ ನಂದಿನಿ ಹಾಲಿನ ದರ ಏರಿಕೆ ಮಾಡಬೇಕು ಎಂದು ಹಾಲು ಒಕ್ಕೂಟಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದೆ. 5 ರೂ. ಅಲ್ಲದಿದ್ದರೂ ಕನಿಷ್ಠ 3 ರೂ. ಆದರೂ ಹೆಚ್ಚು ಮಾಡಿ ಎಂದು ಒತ್ತಾಯಗಳಿವೆ. ಇಂದು ಈ ಬಗ್ಗೆ ತೀರ್ಮಾನವಾಗುವ ಸಾಧ್ಯತೆಯಿದೆ.

ಇನ್ನು, ಬೆಂಗಳೂರಿಗರಿಗೆ ಕಾವೇರಿ ನೀರಿನ ದರ ಏರಿಕೆ ಶಾಕ್ ಕೂಡಾ ಇಂದೇ ಸಿಗುವ ಸಾಧ್ಯತೆಯಿದೆ. ಕಳೆದ ಕೆಲವು ದಿನಗಳ ಹಿಂದೆ ಕಾವೇರಿ ನೀರಿನ ದರ ಏರಿಕೆ ಮಾಡುವ ಬಗ್ಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಸದನದಲ್ಲಿ ಘೋಷಿಸಿದ್ದರು. ಇಂದು ಆ ಬಗ್ಗೆ ಘೋಷಣೆಯಾಗುವ ಸಾಧ್ಯತೆಯಿದೆ.

ಈಗಾಗಲೇ ಬಸ್, ಮೆಟ್ರೋ ಪ್ರಯಾಣ ದರ ಏರಿಕೆಯಿಂದ ತತ್ತರಿಸಿರುವ ಜನಕ್ಕೆ ಈಗ ಒಟ್ಟೊಟ್ಟಿಗೇ ಎರಡು ದರ ಏರಿಕೆ ಶಾಕ್ ಎದುರಾಗುವ ಸಾಧ್ಯತೆಯಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ